Collegu getalli song details
- Song : Collegu getalli
- Singer : V Harikrishna
- Lyrics : Yogaraj bhat
- Movie : Paramaathma
- Music : V Harikrishna
Collegu getalli lyrics in Kannada
ಕಾಲೇಜು ಗೇಟಲ್ಲಿ ಲಿರಿಕ್ಸ್
ಕಾಲೇಜು ಗೇಟಲ್ಲಿ ಫೇಲ್ ಆಗಿ ಬಂದವರ ಕಾಪಾಡೋ ಚೊಂಬೇಶ್ವರ…. ಆಆ
ಮಾರ್ಕ್ಸ್ ಕಾರ್ಡಿನಲ್ಲಿ ಸೊನ್ನೆ… ರೌಂಡ್ ಆಗಿ ಕಾಣುವುದು
ಏನ್ ಮಾಡ್ಲಿ ಮಾಡ್ಲಿ ಚೊಂಬೇಶ್ವರ…
ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಪರಮಾತ್ಮ
ಉಸಿರಾಡು ಆಡು ಆಡು ಆಡು ಅಂತಾನೆ
ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪರಮಾತ್ಮ
ಪಾಸ್ ಆಗು ಆಗು ಆಗು ಅಂತಾನೆ
ಫೇಲ್ ಆಗದೋರುಂಟೆ ಚೊಂಬೇಶ್ವರ… ಪಾಸ್ ಆಗಿ ಏನ್ ಮಾಡ್ಲಿ ಒಂದೇ ಸಲ..
ತನ ಡೂನ ಡೂನ ಡೂನ ಡೂನ ತನ ಡೂನ ಡೂನ ಡೂನ ಡೂನ
ಒಂದ್ ಒಂದ್ಲ ಒಂದು.. ಎರಡ್ ಎರಡ್ಲ ಎರಡು ಮೂರ್ ಮೂರ್ಲ ಮೂರು
ಬೈ ಹಾರ್ಟು ಮಾಡು
ಹೋ ಮೈ ಗಾಡ್ಸಿಲ್ಲ.. What a calculation
ಹೈಯೆಸ್ಟ್ ಮರ್ಕ್ಸ್ ಕೊಟ್ಟೋನು ಲೂಸು ಅರ್ಧಕ್ಕೆ ಕೋರ್ಸ್ ಬಿಟ್ಟೋವ್ನ ಬಾರ್ಸು
ಮ್ಯೂಸಿಕ್ ನಲ್ಲಿರೋದು ಏಳೇ ಸ್ವರ ಇನ್ನೆಷ್ಟು ಕೂಗೋದು ಎಮ್ಮೆ ತರ…
ಟ್ರೈ ಮಾಡು ಏನಾದ್ರೂ ಬೇರೆ ತರ..
ಸೈಕಲ್ ನಲ್ಲಿ ಏರು ತೆಂಗಿನ ಮರ
ಹೇ ರಾಮ.. ಪಿಯುಸಿ ನಲ್ ಒಮ್ಮೆ ಡುಂಕಿ
ಆಮೇಲೆ ಡಿಗ್ರಿಲಿ ಮೂರ್ ಮೂರು ಬಾಕಿ
ಎಕ್ಸಾಮ್ ಹಾಲ್ ಇನಲ್ಲಿ ನನ್ನ ಪರಮಾತ್ಮ
ಮಾರ್ನಿಂಗ್ ಶೋಗೆ ಹೋಗು ಕಂದ ಅಂತಾನೆ
ಕ್ಲಾಸ್ ಅಲ್ಲಿ ನಾನು ಒಬ್ಬನೇ ಒಳ್ಳೇ ಪುಣ್ಯಾತ್ಮ
ಆನ್ಸರ್ ಶೀಟಿನಲ್ಲಿ ಬರೆದೆ ಕೊಶನ್ನೇ
ಸಬ್ಜೆಕ್ಟೆ ಸರಿ ಇಲ್ಲ ಚೊಂಬೇಶ್ವರ
ಸಿಲಬಸ್ಸು ಇರಬಾರದ ಸಿನಿಮಾ ತರ…
ತನ ಡೂನ ಡೂನ ಡೂನ ಡೂನ
ತನ ಡೂನ ಡೂನ ಡೂನ ಡೂನ
ಓದ್ಕೊಂಡು ಓದ್ಕೊಂಡು ಓದ್ಕೊಂಡಿರು.. ಡಾಟ್ ಇದ್ರೆ
ಹುಡುಗೀರ್ನ ಕೇಳು ಗುರು..
ಇಲ್ಲಿಂದ ಹೋಗ್ತಾರ ಯಾರಾದರು… ಕಾಲೇಜು ಟೆಂಪಲ್ ಇಲ್ಲೇ ಇರು
ಕಾಳೊಂದು ಭಗವಂತ ಹಾಕಿರುವ ಟೋಪಿ
ಇಲ್ಲಿಂದ ಪಾಸಾಗಿ ಹೋದವರೆ ಪಾಪಿ..
ದನ ಕಾಯುತಿದ್ದ ಹರಿಕ್ರಿಷ್ಣ ಪರಮಾತ್ಮ
ಕುರುಕ್ಷೇತ್ರದಲ್ಲಿ ಡ್ರೈವರ್ ಆಗಿ ಇರ್ಲಿಲ್ವೆ..
ಅನಿಸಿದ್ದು ಮಾಡುವನೆ ಪುಣ್ಯಾತ್ಮ
ಮಾಡೋದು ಏನು ಅಂತ ನಮಗೆ ಗೊತ್ತಿಲ್ವ.. ಸಿಸ್ಟಮ್ ಸರಿ ಇಲ್ಲ ಚೊಂಬೇಶ್ವರ…
ಪ್ರೈಮ್ ಮಿನಿಸ್ಟರ್ ಆಗ್ಬಿಡ್ಲ ಒಂದೇ ಸಲ…
ತನ ಡೂನ ಡೂನ ಡೂನ ಡೂನ
ತನ ಡೂನ ಡೂನ ಡೂನ ಡೂನ
ಕಾಲೇಜು ಶಾಶ್ವತ…