Chendutiya pakkadalli – Sonu nigam Lyrics
Singer | Sonu nigam |
Chendutiya pakkadali song details – Drama
▪ Film: Drama
▪ Song: Chendutiya Pakkadali
▪ Singer: Sonu Nigam
▪ Music: V.Harikrishna
▪ Lyricist: Jayant Kaikini
Chendutiya pakkadali song lyrics in Kannada – Drama
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು, ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿ ತುಂಟ ಮಾತೊಂದ ನಾನಡ್ಲ
ಕಿಡಿಗೇಡಿ ಕನಸೊಂದ ಕಟ್ಟಿರ್ಲಾ, ತಡ ಮಾಡದೆ ಸಣ್ಣ ಮುತ್ತಿಡ್ಲ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲ..
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು, ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿ ತುಂಟ ಮಾತೊಂದ ನಾನಡ್ಲ.
ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು , ಹಾಡಿ ನೋಡೆನ್ನನು ಸ್ಮೈಲ್ ಆರ್ದು ಬರಲಿ
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದ, ನೀ ಮುಡಿದ ಸಂಪಿಗೆಯ ಸ್ಮೆಲ್ ಆರ್ದು ಸಿಗಲಿ.
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ, ಬೆನ್ನಿನಲಿ ಬೆವರಾಗಿ ನಾನಿರ್ಲಾ
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ.
ಚೆಂದುಟಿಯ ಪಕ್ಕದಲೀ …..
ಒಮ್ಮೊಮ್ಮೆ ಯೋಚಿಸುವೆ, ಯಾತಕ್ಕೆ ನಾನದೆ ಎದೆಯೊಳಗೆ ಕುರ್ಚಿಯನು ಕೆತ್ತುವ ಬಡಗಿ
ಇಬ್ಬನಿಯು ಸುಡುತಿಹುದು, ತಂಗಾಳಿ ನಗುತಿಹುದು ಇನ್ನೆಷ್ಟು ಚಳಿಗಾಲ ಕಾಯೋದೇ ಹುಡುಗಿ
ಸ್ವಪ್ನಕ್ಕೆ ಬೆಡ್ ಶೀಟು ಹೊಚ್ಚಿರ್ಲ , ಚಂದ್ರನ್ಗೆ ಮೊಂಬತ್ತಿ ಕೊಟ್ಟಿರ್ಲಾ..
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ…
ಬಿಗಿಡಿಟ್ಟ ತಂಬೂರಿ ತಂತಿಯಂಥಾಗಿರುವೆ, ತುಂಡು ಮಾಡೇನ್ನನು ಸೌಂಡ್ ಆರ್ದು ಬರಲಿ
ನಿನ್ನ ತಲೆ ದಿಂಬಿನ ಚಿತ್ತಾರವಾಗಿರುವೆ , ನಿನ್ನ ಕನವರಿಕೆಯಲಿ ಒಂದಾದ್ರು ಸಿಗಲಿ.
ಸಿಗದಂಥ ಕೊನೆ ಸಾಲು ಬಿಟ್ಟಿರ್ಲಾ , ಯಾವ್ದಕ್ಕೂ ಕೊನೆಗೊಂದು ಡಾಟ್ ಇಡ್ಲ
ಒಹ್… ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ…
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು, ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿ ತುಂಟ ಮಾತೊಂದ ನಾನಡ್ಲ!!