Baanigondu elle ellide song details
- Song : Baanigondu elle ellide
- Singer : Dr Rajkumar
- Lyrics : Chi Udayashankar
- Movie : Premada Kaanike
Baanigondu elle ellide lyrics in Kannada
ಬಾನಿಗೊಂದು ಎಲ್ಲೆ ಎಲ್ಲಿದೆ,
ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ,
ನಿಧಾನಿಸು ನಿಧಾನಿಸು {೨}
ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನೂ ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ, ವಿನೋದವಾಗಲಿ
ಅದೇನೆ ಆಗಲಿ ಅವನೆ ಕಾರಣ
ಬಾನಿಗೊಂದು ಎಲ್ಲೆ ಎಲ್ಲಿದೆ
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷ ಒಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡೂ ಉಂಟು ಬಾಳ ಲತೆಯಲಿ
ದುರಾಸೆ ಏತಕೆ, ನಿರಾಸೆ ಏತಕೆ
ಅದೇನೆ ಬಂದರೂ ಅವನ ಕಾಣಿಕೆ
ಬಾನಿಗೊಂದು ಎಲ್ಲೆ ಎಲ್ಲಿದೆ,
ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ,
ನಿಧಾನಿಸು ನಿಧಾನಿಸು(೨)
Lifetime lesson was written by Udayshenkar sir and tremendously executed by Dr rajkumar sir.