Aaythu bidi – Abhishek M Muruda Lyrics
Singer | Abhishek M Muruda |
Aaythu bidi song details – Abhishek M Muruda
▪ Music – AP Ravi Keerthi
▪ Singer – Abhishek M Muruda
▪ Lyrics – Siddu
Aaythu bidi song lyrics in Kannada – Abhishek M Muruda
ಆಯ್ತು ಬಿಡಿ
ನಮ್ಮಪ್ಪ ಬೈತಿದ್ರು ಮನೇಲಿ
ರೋಡಲ್ಲಿ ಹುಡುಗೀರ ಎದ್ರಲ್ಲಿ
ಹೋದಲ್ಲಿ ಬಂದಲ್ಲಿ ಎಲ್ಲಿ ಬೇಕೊ ಅಲ್ಲಿ
ನಾವು ದಂಡಪಿಂಡರಂತೆ
ಆಯ್ತು ಬಿಡಿ
ಭೂಮಿಗೆ ಭಾರವಂತೆ
ಆಯ್ತು ಬಿಡಿ
Waste body ಅಂತೆ
ಹೆಂಗಿದ್ರೂ ತಪ್ಪೇನೆ
ಆಯ್ತು ಬಿಡಿ
ನಾವು ಲೋಫರ್
ಆಯ್ತು ಬಿಡಿ
ನಾವು ಚಪ್ಪರ್
ಆಯ್ತು ಬಿಡಿ
ನಾವು ಮೂರು ಬಿಟ್ಟೋರು
ನಮ್ಮ ಏಜಲ್ಲಿ ನೀವೇನ್ ಕಮ್ಮೀನೆ
ನಮ್ಗಿಂತ ಒಂದ್
ಕೈ ಜಾಸ್ತಿನೆಧಿಮಾಕು
ನಾವುನು ಹಂಗೇನೆ
ಹೋಗ್ಲಿ ಹೊಟ್ಟೇಗ್ ಹಾಕೊಳಪ್ಪೊ
ಧಮ್ಮು ಎಳೆಯೋದು ತಪ್ಪಂತೆ
ಎಣ್ಣೆ ಹೊಡೆಯೋದು ತಪ್ಪಂತೆ
ಹುಡ್ಗೀರ್ ನೋಡೋದು ತಪ್ಪಂತೆ
ಲೈನ್ ಹೊಡಿಯೋದು ತಪ್ಪಂತೆ
ಬಂಕು ಹಾಕೋದ್ ತಪ್ಪಂತೆ
ಫೇಲ್ ಆಗೋದ್ ತಪ್ಪಂತೆ
ಈ ವಯಸ್ಸಲ್ಲಿ ಮಾಡ್ದೇನೆ
ಇನ್ ಯಾವ ವಯ್ಯಸ್ಸಲ್ಲಿ ಮಾಡೋದಪ್ಪೋ
ದಿನ ಬೆಳಿಗ್ಗೆ ಎದ್ದು ಏನ್
ಕಡಿದು ಕಟ್ಟೆ ಹಾಕ್ತೀಯ ಏಳ
ಬೆಳ್ಳಂ ಬೆಳಿಗ್ಗೆ ಬೇಗನೆ ಎದ್ದೇಳ್ತಿನಿ
ಸ್ನಾನ ಗೀನ ಒಂದು ಎರಡು ಮುಗಿಸುಕೊಳ್ತೀನಿ
ಅಪ್ಪನ್ ಜೋಬಲ್ ದುಡ್ಡು ಇದ್ರೆ ಎತ್ಕೊಳ್ತಿನಿ
ಬೈಕ್ ಎತ್ಕೊಂಡು ಬಸ್ ಸ್ಟ್ಯಾಂಡ್ ಗೆ ಹೊಂಟೋಯ್ತಿನಿ
Colour full ಹುಡುಗಿ ಸಿಕ್ಕುದ್ರೆ
ಕಾಳ್ ಹಾಕ್ತೀನಿ
ಹಾಯ್ ಹೇಳಿ ಡ್ರಾಪ್ ಕೇಳಿ ಕರೀತಿನಿ
ಬಂದ್ರೂನೂ ok
ಬರ್ದಿದ್ರೂ OK
ನನ್ ಪಾಡಿಗೆ ತೆಪ್ಪುಗೆ ಹೊರಟೋಕ್ತಿನಿ
ಯಾಕೊ ಎಲ್ಲೊ ಮಿಸ್ ಹೊಡಿತೈತೊ
ಇವಳ್ ಯಾರು ಅಂತ ನೆನಪಾಯ್ತೊ
Actually ನಾ ನು ನಿನ್ನ ,childhood friend
ನೆನಪಿದೆಯಾ ನಿನಗೆ
ಕುಂಟೆಬಿಲ್ಲೆ ಹಾವು ಏಣಿ ಆಡುತಿದ್ದವಲ್ಲೇ
ನೆನಪಿದೆಯಾ ನಿನಗೆ
ಹಳೆ ಕಬ್ಬಿಣ ಪೇಪರ್ ಕೊಟ್ಟು
Ice candy ತಿಂದಿದ್ವಿ
ನೆನಪಿದೆಯಾ ನಿನಗೆ
ಮಾರಮ್ಮನ ಜಾತ್ರೆಯಲ್ಲಿ watch ಗೊಂಬೆ ಕದ್ದಿದಲ್ವೆ
ನೆನಪಿದೆಯಾ ನಿನಗೆ
ನೆನಪಾಯಿತು ನಾನು ಯಾರು ಅಂತ
ಕೊಟ್ಟೆಬಿಟ್ಲು ನಂಬರ್
ನನ್ನ ಯೋಗ್ಯತೆಗೂ ಒಂದು
ಹುಡುಗಿ ಸಿಕ್ಕಿದ್ಲು
ಇನ್ಮೇಲೆ ನನ್ ಲೈಫ್ ಸೂಪರು
ಆಯ್ತು ಬಿಡಿ
ನಾವಾ ಲೋಫರ್
ಆಯ್ತು ಬಿಡಿ
ನಾವು ಚಪ್ಪರ್
ಆಯ್ತು ಬಿಡಿ
ನಾವು ಮೂರು ಬಿಟ್ಟೋರು
ಕಾಲೇಜಿಗೆ ಲೇಟ್ ಆಗಿದೆ
ಟೈಮ್ ಹತ್ತಾಗಿದೆ
ಸಿಕ್ಕ ಸಿಕ್ಕ ಲಚ್ಚರ್ಸ್ ಬೈದಾಗಿದೆ
ಸರ್ ಬಾಯಿಗಿ ಬಂದಂಗೆ ಬೈದರು
ಕ್ಲಾಸ್ ಹೊರಗೆ ನಿಲ್ಲು ಅಂದರು
ಹೋಗೊ ಬರುವರೆಲ್ಲ ನನ್ನ ನೋಡಿದರು
ನಾನು ತಲೆ ಎತ್ತಿ ಗತ್ತಲಿ ನಿಂತೆ ಗುರು
ಹುಡುಗಿರು ಬಂದರು ನೋಡಿ ನಕ್ಕರು
ಶುರುವಾಯಿತು ನನಗೆ ನಾಚಿಕೆ ಗುರು
ಅಲ್ಲಿಂದ ಹೊಂಟೇನು ಬಾರಲ್ಲಿ ಕುಂತೇನು
ಕಾಸು ಇಲ್ದೆ ಲೋಕಲ್ ಎಣ್ಣೆ ಕುಡಿದೇನು
ಸಿಗರೇಟು ಬಿಟ್ಟು ಮೋಟು ಬೀಡಿ ಹೊಡೆದೆನು
ಸೀದಾ ಹೋಗಿ ಮನೆಗೆ
ನನ್ನ ರೂಮು ಕೋಣೆಗೆ ಅಡ್ಡಾದಿಡ್ಡಿ ಮಲಗ್ದೆ ಗುರು
ಆಯ್ತು ಬಿಡಿ
ಆಯ್ತು ಬಿಡಿ
ಆಯ್ತು ಬಿಡಿ
ಆಯ್ತು ಬಿಡಿ
ಆಯ್ತು ಬಿಡಿ
ನಾವು ಲೋಫರ್
ಆಯ್ತು ಬಿಡಿ
ನಾವು ಚಪ್ಪರ್
ಆಯ್ತು ಬಿಡಿ
ನಾವು ಮೂರು ಬಿಟ್ಟೋರ್