Raagadale lyrics – Ganesh Desai , Ragani bhat – super cine lyrics

Raagadale – Ganesh Desai , Ragini bhat Lyrics

Singer Ganesh Desai , Ragini bhat

About the song

▪ Lyrics : Shadakshari Sugganahally
▪ Music : Ganesh Desai
▪ Singers : Ganesh Desai, Ragini Bhat

Lyrics

ರಾಗದಲೆಗೆ ಭಾವ ಬೆಸುಗೆ ಸೇರಬೇಕು ಗೀತೆಗೆ
ನಾಭಿಯಿಂದ ಹೊಮ್ಮಿ ಸ್ವರವು ಹಾಯ ಬೇಕು ಕೊರಳಿಗೆ

ಸಪ್ತಸಾಗರದಾಳದಲ್ಲಿದೆ ನಾದ ಬಿಂದುವಿನಾಲಯ
ಈಜಿ ತಲುಪುವರೆಷ್ಟು ಮಂದಿ ಪಡೆಯಲದರ ಸಿದ್ಧಿಯ

ಶೃಂಗ ಗಿರಿಗಳ ತುತ್ತತುದಿಯಲಿ ಎಲ್ಲೋ ಒಂದೆಡೆ ಲಯವಿದೆ
ತಲುಪಬಹುದು ಅಲ್ಲಿಗೊಮ್ಮೆ ನಿರತ ಇದ್ದರೆ ಸಾಧನೆ

ದೇಹಿ ಎನ್ನುವ ಭಾವ ಬೇಕು ನಾದರಾಣಿಯ ಅಡಿಯೊಳು
ಎಂದೋ ಒಮ್ಮೆ ಕರುಣೆ ಬಂದು ಇನಿತೆ ಇನಿತು ಕೊಡುವಳು

Leave a Comment

Contact Us