Madhura pisumaatige lyrics ( ಕನ್ನಡ ) – Birugaali

Madhura pisumaatige song details :

  • Song : Madhura pisumaatige
  • Singer : Mohit Chauhan, Shamitha Malnad
  • Lyrics : Jayanth Kaikini
  • Movie : Birugaali
  • Music : Arjun Janya
  • Label : Alphadigitech

Madhura pisumaatige lyrics in kannada

ಮಧುರಾ ಪಿಸು ಮಾತಿಗೆ
ಅದರಾ ತುಸು ಪ್ರೀತಿಗೆ
ಇರುವಲ್ಲಿಯೆ ಇರಲಾರದೆ
ಬರುವಲ್ಲಿಯು ಬರಲಾರದೆ
ಸೋತೆ ನಾನು ನಿನ್ನ ಪ್ರೀತಿಗೆ
ಓಹೋ ಓಹೋ..
ಚೂರಾದೆ ಒಂದೆ ಭೇಟಿಗೆ

ಮಧುರಾ ಪಿಸು ಮಾತಿಗೆ
ಅದರಾ ತುಸು ಪ್ರೀತಿಗೆ

ಕಂಪಿಸುತಾ ಕರೆದಾಡುವೆನು
ಅಭಿಲಾಷೆಯ ಕರೆಗೆ
ದಾರಿಯಲಿ ಬರೀ ನೋಡುವೆನು
ನೀ ಕಾಣುವಾ ವರೆಗೆ
ನಿನ್ನದೆ ಪರಿಮಳ
ನಿನ್ನಯ ನೆನಪಿಗೆ
ಎನಿದು ಕಾತರ
ಬಾರಿ ಬಾರಿ ನಿನ್ನಾ ಭೇಟಿಗೆ
ಸೋತೆ ನಾನು ನಿನ್ನ ಪ್ರೀತಿಗೆ
supercinelyrics.com

ಮಧುರಾ ಪಿಸು ಮಾತಿಗೆ
ಅದರಾ ತುಸು ಪ್ರೀತಿಗೆ

ನೋಡಿದರೆ ಮಿತಿ ಮೀರುತಿದೆ
ಮನಮೋಹಕ ಮಿಡಿತಾ
ಆಳದಲಿ ಆತಿಯಾಗುತಿದೆ
ಅಪರೂಪದ ಸೆಳೆತ
ನಿನ್ನದೆ ಹೆಸರಿದೆ
ಕನಸಿನಾ ಊರಿಗೆ
ಕುಣಿಯುತ ಬಂದೆನು
ಭಿನ್ನವಾದ ನಿನ್ನ ದಾಟಿಗೆ
ಸೋತೆ ನಾನು ನಿನ್ನ ಪ್ರೀತಿಗೆ

ಮಧುರಾ ಪಿಸು ಮಾತಿಗೆ
ಅದರಾ ತುಸು ಪ್ರೀತಿಗೆ
ಇರುವಲ್ಲಿಯೆ ಇರಲಾರದೆ
ಬರುವಲ್ಲಿಯು ಬರಲಾರದೆ
ಸೋತೆ ನಾನು ನಿನ್ನ ಪ್ರೀತಿಗೆ
ಓಹೋ ಓಹೋ..
ಚೂರಾದೆ ಒಂದೆ ಭೇಟಿಗೆ

Madhura pisumaatige song video :

Leave a Comment

Contact Us

error: Content is protected !!