Kannadiga title track song details
- Song : Kannadiga title track
- Singer : Dr Shivarajkumar
- Lyrics : Santhosh Ananddram
- Movie : Kannadiga
- Music : Ravi basrur
- Label : Anand audio
Kannadiga title track lyrics in kannada
ಸಿರಿಗನ್ನಡಂ ಏಳ್ಗೆ ಸಾಂಗ್ ಲಿರಿಕ್ಸ್
ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ
ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ
ಕರು ಕರೆಯುವಂತ
ಕರುಣೆಯ ಪಂಥ
ಕರುಳಾಬಳ್ಳಿ ಈ ಕನ್ನಡ
ಕಲಿಸೋನ ಗತ್ತು ಕಲಿಯೋನ ಸ್ವತ್ತು
ಕಲಿಯಂತೆ ಕಲಿತೋನು ಕನ್ನಡ
ಅಂತರಂಗ ಶುದ್ಧಿ ಮಾಡೋ
ವಚನವೇ ಈ ಭಾಷೆ
ಜನಜಾಗೃತಿಯ ಅರಿವು ಮೂಡಿಸೋ
ಜನಪದ ಈ ಭಾಷೆ
ಭೇದವಿರದ ಕುಲವಿದು
ಕ್ರೋಧವಿರದ ಕಲೆಯಿದು
ದಯೆಗೆ ಧರ್ಮಸ್ಥಳವಿದು
ನಾಡು ಕನ್ನಡ
ಕಳುವಾಗದ ನಿಧಿ ಇದು
ಕೊನೆಯಾಗದ ನದಿ ಇದು
ಕನ್ನಡಿಗನ ವಿಧಿ ಇದು
ಮಾತನಾಡು ಕನ್ನಡ
ಮಾತೃಭಾಷೆ ತಾಯಿಯಂತೆ
ಕೊಟ್ಟ ಮಾತು ತಪ್ಪದಂತೆ
ಕಾಯುತಾಳೆ ನಮ್ಮ ಪುಣ್ಯಕೋಟಿ ಕನ್ನಡ
ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ
ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ