Categories
Vasuki Vaibhav

Hey krishna lyrics ( ಕನ್ನಡ ) – Narayana narayana

Hey krishna song details :

  • Song : Hey krishna
  • Singer : Vasuki Vaibhav
  • Lyrics : Chethan kumar
  • Movie : Narayana narayana
  • Music : Sathya Radhakrishna, Jathin Dharshan
  • Label : A2 music

Hey krishna lyrics in kannada

ಅಂತರಂಗವು ಮದವ ಬಿಟ್ಟು
ನಿನ್ನ ಮುಂದೆ ಮಂಡಿವೂರಿದೆ
ಅಂತರಾತ್ಮವು ನೋಡಲೆಂದು ದಿನವು
ನಿನ್ನ ಅಂಗಲಾಚಿದೆ

ಅತೀ ಕನಿಷ್ಠ ನಾನು ಸರ್ವಶ್ರೇಷ್ಠ ನೀನು
ಪರಮ ಪಾಪಿ ನಾನು ಪರಮಾದ್ಭುತ ನೀನು
ನಿನ್ನ ಹುಡುಕುವೆ ಪ್ರತಿ ಕಣ ಕಣದಲೂ ನಾನು
ಹೇ ಕೃಷ್ಣಾ ಹೇ ಕೃಷ್ಣಾ ಹೇ ಕೃಷ್ಣಾ ಹೇ ಕೃಷ್ಣಾ

ಭಕ್ತಿ ಮೆಚ್ಚಿ ಬಂದೆ ನೀನು
ದಾಸರಿಗೊಲಿದಂತೆ ದರುಶನವ ನೀಡು
ನೀನೇ ಹರುಷ ನೀನೇ ವರುಷ
ಜಗಮೃಗಖಗಗಳನು ಮುನ್ನಡೆಸೋ ಪುರುಷ
ಹರಿಯು ನೀನು ಹರನು ನೀನು
ಜಗದ ಜೀವಗಳಿಗೆ ಹಸಿವ ತಣಿಸುವವನು
ನಿನ್ನ ಹುಡುಕುವೆ ಪ್ರತಿ ಕಣ ಕಣದಲೂ ನಾನು
ಹೇ ಕೃಷ್ಣಾ ಹೇ ಕೃಷ್ಣಾ ಹೇ ಕೃಷ್ಣಾ ಹೇ ಕೃಷ್ಣಾ
supercinelyrics.com

ಕಡಲ ಸೆಳೆತ ನಿನ್ನ ಮೊರೆತ
ಲೌಕಿಕ ಸುಖಗಳನು ಕಳೆದು ಬಿಡು ನೀನು
ನೋಡೋ ತುಡಿತ ದಿನವೂ ಸತತ
ಮನಸಿನ ಅಣು ಅಣುಅಣುವಲೂ ನಿನ್ನ ಜಪವೆ ಕೇಳು
ಭೂಮಂಡಲ ನಿನ್ನ ಬೆರಳ ತುದಿಯ ಮೇಲೆ
ಆದೇಶದಂತೆ ಜರಗುವದು ನಾಳೆ
ನಿನ್ನ ಕೊಳಲಿನ ದನಿ ಕೇಳಿಸು ಬಾ ಬೇಗ
ಹೇ ಕೃಷ್ಣಾ ಹೇ ಕೃಷ್ಣಾ ಹೇ ಕೃಷ್ಣಾ ಹೇ ಕೃಷ್ಣಾ

Hey krishna song video :

Leave a Reply

Your email address will not be published. Required fields are marked *

Contact Us