Categories
Sonu nigam

Naanaadadaa maathellava lyrics ( ಕನ್ನಡ ) – Gaalipata 2

Naanaadadaa maathellava song details

  • Song : Naanaadadaa maathellava
  • Singer : Sonu Nigam
  • Lyrics : Jayanth Kaikini
  • Movie : Gaalipata 2
  • Music : Arjun janya
  • Label : Anand audio

Naanaadadaa maathellava lyrics in kannada

ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವಾ ಮುಂಗೋಪವಾ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
ಓದದಾ ಪುಸ್ತಕ ನಾನು ಎದೆಗೊತ್ತಿಕೊಳ್ಳುವೆಯೇನು
ಬಿಸಿಯ ಉಸಿರು ನೀಡಿ, ಪ್ರತಿ ಸಾಲನೂ ಕಥೆಯಾಗಿಸು..

ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
supercinelyrics.com

ಮಧುರ ಕನಸಿನ ಕದಾ
ತೆರೆದೆ ಇಡುವೆನು ಸದಾ
ಒಂಟಿ ನಾನಾದರೂ ಸಂಭಾವಿತಾ
ಸರಳ ಸಂಗತಿಯಲಿ
ಸಲಿಗೆ ಸಂಭವಿಸಲಿ
ಜಂಟಿ ಅಭ್ಯಾಸಕೆ ಸುಸ್ವಾಗತಾ
ತೆರೆಯಾ ಮರೆಯಾ ವಿಷಯಾ ತುಂಬಾ ಇದೆ
ಕೃಪಯಾ ಹಿಂಬಾಲಿಸು

ನಿನ್ನ ಸೆಳೆತದ ಸವಿ ಬರೆಯಲಾರನು ಕವಿ
ಮನದಿ ಬರಿ ನಿನ್ನದೇ ಚಿತ್ರೋತ್ಸವ
ಪಂಚನಾಮೆಯ ಬಿಡು
ಪ್ರಥಮ ಚಿಕಿತ್ಸೆಯ ಕೊಡು
ಮಾಡಿ ಸದ್ದಿಲ್ಲದಾ ಅಪಘಾತವಾ
ಉಭಯಾ ಹೃದಯಾ ಅದಲೂ ಬದಲಾದರೆ
ನೀನೇ ಸಂಭಾಳಿಸು

ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವಾ ಮುಂಗೋಪವಾ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು

Naanaadadaa maathellava song video :

Leave a Reply

Your email address will not be published. Required fields are marked *

Contact Us