Lullaby lyrics ( ಕನ್ನಡ ) – Vikrant Rona

Lullaby song details :

  • Song : Lullaby
  • Singer : Vijay Prakash
  • Lyrics : Anup Bhandari
  • Movie : Vikrant Rona
  • Music : B Ajaneesh Loknath
  • Label : Lahari music

Lullaby lyrics in kannada

ತಣ್ಣನೆ ಬೀಸೋ ಗಾಳಿ ಸಾಂಗ್ ಲಿರಿಕ್ಸ್

ತಣ್ಣನೆ ಬೀಸೋ ಗಾಳಿ
ಹಾಡಿದೆ ಜೋಜೋ ಲಾಲಿ
ಈ ನನ್ನ ಮಡಿಲೆ
ನಿನ್ನಾ ತೂಗೋ ಉಯ್ಯಾಲೆ
ತೂಗೋ ಉಯ್ಯಾಲೆ

ಚಂದ ಮಾಮ ಬಾನಾ ಏರಿ ಕದ್ದು ಮಲಗಿದ
ನಿದ್ದೆಗಣ್ಣಿನಲ್ಲೇ ಇಡೀ ಭೂಮಿ ಬೆಳಗಿದ
ಚಂದ್ರನ ಬೆಳಕಿನಲ್ಲಿ
ಮಲಗು ರಾಜಕುಮಾರಿ
ಕನಸಿನ ತೇರಾ ಏರಿ ಮಾಡು ಸವಾರಿ
ನೀ ಮಾಡು ಸವಾರಿ
supercinelyrics.com

ಗುಮ್ಮ ಬರುತಾನೆಂದೇಕೆ
ಅಳುವೆ
ನಿನ್ನ ಬಳಿಯೇ ನಾನಿರುವೆ ಕಂದ
ಓಡಿ ಬಂದು ನಿನ್ನಾ ಅಪ್ಪಿಕೊಳ್ಳುವೆ
ಹೋಗದಿರು ನೀ ದೂರಾ ನನ್ನಿಂದ

ಇರುಳನು ಬೆಳಗೊ ನಗು
ಎಂದೂ ಹೀಗೆ ಇರಲಿ ಮಗು
ನನ್ನಾ ಜೀವ ನಿನ್ನ ಒಳಗಿದೆ
ಮೇಘರಾಜ ಕೂಡ ನೀರಾಗಿ ಕರಗಿದ
ಬಾಚಿ ತಬ್ಬಿಕೊಂಡು ಹಸಿರಾಯ್ತು ಮರಗಿಡ
supercinelyrics.com

ಎಲೆಯ ಬೊಗಸೆಯಿಂದ
ಭೂಮಿಯ ಮೇಲೆ ಜಾರಿ
ಮಳೆ ಹನಿ ಮಾಡೋ ಸದ್ದೆ
ಸುವ್ವಿ ಸುವ್ವಾಲಿ
ಸುವ್ವಿ ಸುವಾಲಿ

ನನ್ನ ಬಾಳಿನಲ್ಲಿ ನೀನು ಇರುವೆ
ಕಣ್ಣ ಹನಿಯ ಒರೆಸೋ ಬೆರಳಾಗಿ
ಎಂದೂ ನಿನ್ನ ಹಿಂದೆ ಹಿಂದೆ ಬರುವೆ
ಎಲ್ಲೇ ಹೋದರೂ ನಿನ್ನ ನೆರಳಾಗಿ
ಪ್ರೀತಿಯಿಂದ ಗುದ್ದಾಡುವೆ
ಅಪ್ಪಿಕೊಂಡು ಮುದ್ದಾಡುವೆ
ತುಂಟಿ ಹೇಗೋ ನನ್ನ ನಗಿಸುವೆ

ಸದ್ದು ಮಾಡ ಬೇಡ ಓ ಬೀಸೋ ಗಾಳಿಯೇ
ಕಂದನಿಗೆ ಸಾಕು ಈ ನನ್ನ ಲಾಲಿಯೇ
ಕಣ್ಣಿನ ರೆಪ್ಪೆ ಮುಚ್ಚಿ
ನಿದ್ದೆಗೆ ಬೇಗ ಜಾರಿ
ಮಲಗೆ ಮಲಗೆ ನನ್ನ ಮುದ್ದು ಬಂಗಾರಿ
ಮುದ್ದು ಬಂಗಾರಿ..
supercinelyrics.com

Lullaby song video :

Leave a Comment

Contact Us