Categories
Manojavvam Aatreya

Devaru devaru lyrics ( ಕನ್ನಡ ) – Mehbooba

Devaru devaru song details :

  • Song : Devaru devaru
  • Singer : Manojavvam Aatreya
  • Lyrics : V Raghu Shastry
  • Movie : Mehbooba
  • Music : Mathews Manu
  • Label : Jhankar music

Devaru devaru lyrics in kannada

ದೇವರು ದೇವರು ಸಾಂಗ್ ಲಿರಿಕ್ಸ್

ಕೈಯ ಮುಗಿಯುವರು
ನಿನ್ನ ಬೇಡಿ ಬರುವವರು
ಮಂಡಿ ಊರುವರು
ತಲೆಬಾಗಿ ಕೂರುವರು
ಶಿಲುಬೆಯ ಎದುರು
ಮೇಣವನು ಉರಿಸಿದರು
ನೋವಿನ ಉಸಿರು ನಿನ್ನೆದುರು ಬಿಡುವವರು
ಕಾಣದ ಹೇ ಕುದ
ಬಾರೋ ನಮ್ಮೆದುರು
ದೇವರು ದೇವರು ಯಾರು ಕಂಡೋರು?
supercinelyrics.com

ಕೈಯ ಮುಗಿಯುವರು
ನಿನ್ನ ಬೇಡಿ ಬರುವವರು
ಜಾತಿಯ ಹೆಸರಲ್ಲೇ ರಕ್ತ
ಹರಿಸೊ ಮಾನವರು
ಧರ್ಮದ ನೆಪದಲ್ಲಿ ಶಾಂತಿ
ಕದಡೋ ದಾನವರು
ಗುಡಿಯ ಒಳಗೆ ನಿನ್ನ ಸ್ಮರಿಸಿ
ಹಣವ ನೀಡಿದರು
ಬಡವನ ಹಸಿವನ್ನೇ ಧೈವ
ಎಂದು ಮರೆತವರು
ಇಲ್ಲಿ ರಾಮನ ಗುಡಿಗಾಗಿ
ಎಲ್ಲ ಬಡಿದು ಸಾಯುವರು
ಒಬ್ಬ ರಾಮನಂತೆ ಬದುಕಲೂ
ಎಲ್ಲ ನೀತಿ ಮರೆತವರು
ಕಾಣದ ಹೇ ಕುದ
ಬಾರೋ ನಮ್ಮೆದುರು
ದೇವರು ದೇವರು ಯಾರು ಕಂಡೋರು?

ಏಸುವ ನಡು ಬೀದಿಯಲ್ಲಿ
ಎಳೆದು ಬಡಿದವರು
ದೇವರ ಮಗನೆಂದು ತಿಳಿದು
ಮೊಳೆಯ ಹೊಡೆದವರು
ಅಲ್ಹಾ ಎಲ್ಲಾ ಎಂದು
ದಿನವೂ ಹಾಡಿದರು
ಅವನ ಹೆಸರ ಹೇಳಿ ಜನರು
ಬಲಿಯ ಪಡೆಯುವರು
ಆ ಗೀತದ ಉಪದೇಶದಲ್ಲಿ
ಬಿಡಿಸಿ ಹೇಳಿದರು
ತಿಳಿ ಪ್ರೇಮವೇ ನಿಜವೆಂಬ
ಅರಿವ ಯಾರು ಹೇಳುವರು
ದೇವರು ದೇವರು ಯಾರು ಕಂಡೋರು?
ಕಾಣದ ಹೇ ಕುದ ಬಾರೋ ನಮ್ಮೆದುರು
supercinelyrics.com

ಹೇ ತಂದಾನಿ ತಾನಾನಾ
ಹೇ ತಂದಾನಿ ತಾನಾನಾ
ರೇ ನನ ನಾನಾನಾ
ಹೇ ತಂದಾನಿ ತಾನಾನಾ
ಹೇ ತಂದಾನಿ ತಾನಾನಾ

ಎಲ್ಲ ಕಡೆಯೂ ನಿನ್ನ
ಅರಸಿ ಹುಡುಕಿ ಹೊರಟವರು
ನಮ್ಮ ಒಳಗೆ ಇರುವ ನಿನ್ನ
ತುಳಿದು ಕೂತವರು
ನಿನ್ನ ಬಗೆಗೆ ಇರುವ ಭ್ರಮೆಯ
ಯಾರು ಅಳಿಸುವರು
ನೀನೆ ಒಮ್ಮೆ ಎದುರು ಬಂದು
ಮೂಡಿಸೊ ಚಿಗುರು
ಇಲ್ಲಿ ಎಲ್ಲರ ಕಣ್ಣೀರು ಒಂದೇ
ಮೇಲೆ ನೋಡುವರು
ನಮ್ಮ ಎಲ್ಲರ ದುಮ್ಮಾನ ನೀಗು
ಎಂದು ಕಾಯುವರು
ಮೂಡರು ಮೂಡರು ಎಲ್ಲ ತಿಳಿದವರು
ಕಾಣದ ಏ ಕುದ
ಬಾರೋ ನಮ್ಮೆದುರು
supercinelyrics.com

Devaru devaru song video :

Leave a Reply

Your email address will not be published. Required fields are marked *

Contact Us