Bhavave Hogi Baa song credits :
Song | Bhavave Hogi Baa |
Singers | Siddhartha Belmannu |
Lyrics | Ramenahalli Jagannatha |
Movie | Hondisi Bareyiri |
Music | Joe Costa and Adil Nadaf |
Label | Sunday Cinemas |
Bhavave Hogi Baa lyrics in kannada :
ಭಾವವೇ ಹೋಗಿ ಬಾ..ಖುಷಿಯಲಿ..
ಇಹಕೂ, ಪರಕೂ, ಮೊದಲ ಪ್ರೇಮ ನೀ..
ದಾರಿಯ ನಡುವಲಿ ಉಳಿದೆ ನೀ..
ನೆನಪಿನ ನೆಪದಲಿ..
ಜೀವದ ಭಾವದೊಡಲಿಗೆ ಏಕಾಂಗಿ ನಾ
ಸಾಗುತಿರು ಈ ಹಾದಿಯಲ್ಲಿ ನೀ ಹಸಿರಾಗಿ…
ಭಾವವೇ ಹೋಗಿ ಬಾ..ಖುಷಿಯಲಿ..
ಇಹಕೂ, ಪರಕೂ, ಮೊದಲ ಪ್ರೇಮ ನೀ..
ಸರಿ ನಾನು ಸರಿ ನಾನು
ಎಂಬ ಅಪಸ್ವರದ ನೆರಳಿನಲಿ..
ಬದುಕಿನ ಸ್ವರ ನರಳಿದೆ..
ಹೊಂದಿಸದೆ ಬದುಕದಿರೆ,
ಬಾಳಿನ ದಾರಿಯಲಿ
ಇರುಳಿನ ಛಾಯೆಯ ಬಿಂಬವೂ ಮೂಡಿದೆ…
ಪ್ರೇಮವೇ ಮೂಡಿ ಬಾ ಇವರಲಿ
ಮಾತಿಗೂ ಮೌನಕೂ ಸಿಗದ ಮಾಯೆ ನೀ.
ಸಂತೆಯಲ್ಲಿ ಸಾಗುತಿರೋ ಜೀವಗಳ
ಹುಡುಕಾಟದೀ…
ಕಳೆದುಹೋದ ಮುಖಗಳ ಮೌನದಲಿ
ಇರುವಂತ ಈ…
ನಗುವು,
ನಟನೆಯೋ..
ಸಹಜವೋ..?
ಅರಿಯದಾಯಿತೆ..
ಅರಿತು ,ಮರೆತು,ಕಲೆತು ಬೆರೆಯುವ..
ಭಾವವೇ ಹೋಗಿ ಬಾ, ಖುಷಿಯಲಿ..
ಇಹಕೂ ಪರಕೂ ಮೊದಲ ಪ್ರೇಮ ನೀ..
ಅದ್ಭುತವಾದ ಸಾಹಿತ್ಯ ಸಾಲುಗಳು, ವಾಸ್ತವ ಬದುಕಿನ ಶೈಲಿಯನ್ನು ಪರಿಚಯಿಸುತ್ತವೆ.. ಶುಭವಾಗಲಿ ” ಹೊಂದಿಸಿ ಬರೆಯಿರಿ” ಚಿತ್ರ ತಂಡಕ್ಕೆ.
Meaningful and heart touching lines.
Great job!