Categories
B Ajaneesh Lokanath Sanjith hegde

Alemaariye lyrics ( ಕನ್ನಡ ) – Rathnan prapancha

Alemaariye song details

  • Song : Alemaariye
  • Singer : Sanjith Hegde, B Ajaneesh Loknath
  • Lyrics : Rohit Padaki
  • Movie : Rathnan prapancha
  • Music : B Ajaneesh Loknath
  • Label : Lahari music

Alemaariye lyrics in kannada

ದೂರ ಇನ್ನು ದೂರ
ಕಾಣದೂರ ಕಡೆಗೆ
ಮೈಲಿಗಲ್ಲು ಇರದ ದಾರಿ ಹುಡುಕಿ ನಡಿಗೆ
ಇಲ್ಲಿ ಇಲ್ಲದೇನೋ ಅಲ್ಲಿ ಸಿಗುವ ಬಯಕೆ
ಇನ್ನು ಕಾಣೋ ಬದುಕು
ಪ್ರತಿ ಗಳಿಗೆ ಕಲಿಕೆ

ಕೀಲಿ ಕೊಟ್ಟ ಗೊಂಬೆ ಅಂತೆ ಈ ಭೂಮಿ
ಮಜಾ ನೋಡುತಿರುವ ಬೇನಾಮಿ
ಬೇಲಿ ಹಾರಿ ಹೋರಾಟ ಮೆರವಣಿಗೆ
ನಕಾಶೆ ಇರದ ಆಸಾಮಿ
ಕತ್ತಲಾಚೆ ಏನಿದೆ?
ತಿಳಿಯದೆ ನುಗ್ಗುವ ಈತ ಯಾರಿ?
ಬೆಳಕು ಕಾಣೋ ಭರದಿ
ಹಿಂತಿರುಗಿ ನೋಡದ ಸವಾರಿ
ಸಂಚಾರ ಕಾಣದೂರಿಗೆ

ಅಲೆಮಾರಿಯೇ..
ಅಲೆಮಾರಿಯೇ..

ನೆನಪೆಲ್ಲ ಮಾಸಿರಲು
ತಿರುವಿ ಹಾಕು ಹೊಸ ಪುಟವ
ಹಾಗೆ ಬಿಟ್ಟ ಜಾಗದಲ್ಲಿ
ತುಂಬುವನು ಭವವ
ಆ ಮಡಿಲ ತಂಪನು
ಈ ಮಣ್ಣಲಿ ಹುಡುಕುತ
ತಿರುಗಿದೆ ವಿಳಾಸವಿಲ್ಲದೆ

ಅಲೆಮಾರಿಯೇ..
ಅಲೆಮಾರಿಯೇ..

ತಿರುವಿನ ತುದಿಯಲಿ, ತಿಳಿಯದ ಸುಳಿ ಇದೆ
ಬಿರುಸಿನ ಬದುಕಿಗೆ, ಬಯಸದ ಬೆಲೆ ಇದೆ

ಬಾಳು ಒಂದು ಖಾಲಿ ಸಂತೆ
ಇಲ್ಲಿ ನಮ್ಮ ಉಳಿವು ಬ್ರಮೆ ಅಂತೆ
ನಿನ್ನಲ್ಲಿರೋ ಉತ್ತರ
ಇನ್ನೆಲ್ಲೋ ನೀ ಬೇಡುತ
ತಿರುಗಿದೆ ವಿಳಾಸವಿಲ್ಲದೆ

ಅಲೆಮಾರಿಯೇ..
ಅಲೆಮಾರಿಯೇ..

Alemaariye song video :

Leave a Reply

Your email address will not be published. Required fields are marked *

Contact Us