Ye Maaraya Song Details:
| Song | Ye Maaraya |
| Singers | Mangli, Kapil Kapilan |
| Lyrics | Pramod Maravanthe |
| Movie | Maarnami |
| Music | Charan Raj |
| Label | Gunadya Productions |
Ye Maaraya Song Spotify:
Ye Maaraya Song Lyrics In Kannada:
(ಪಲ್ಲವಿ)
(Female)
ಅರೆರೆ ಎಂತದೊ ರಗಳೆ ಆಗಿದೆ
ಅವನ ನೋಡಿದ ಕೂಡಲೆ
ಹಸಿದ ಕಂಗಳು ಬಲೆಯ ಬೀಸಿದೆ
ಸಿಲುಕಬಾರದೆ ಸುಮ್ಮನೆ……..
ಈ ಹವಾಮಾನ ಬಿಗುಮಾನ ತಂದು ಸೋಕಿದೆ
ಆ ಅನುರಾಗದನುವಾದ ನೀನೆ
ನಿನ್ನ ನಯವಾದ ನೋಟಾನೆ ಬಲುಸ್ವಾದ
ನಾ ಹೇಗೆ ಮಾಡಲಿ ಹೇಳು ವಾದ…..
ಏ ಮಾರಾಯ ಎಂತ ಗೊತ್ತ
ನಾ ಸುತ್ತಿ ನಿನ್ನ ಸುತ್ತಾ
ಈ ಮಂಡೇನೆ ಹಾಳಾಗಿದೆ
ನಂಗ್ಯಾಕೆ ಬೇಕೀತ್ತಾ………
ಏ ಮಾರಾಯ ಎಂತ ಗೊತ್ತಾ
ನೀ ಎಂತಕೊ ಬರ್ತಾ ಬರ್ತಾ
ಈ ಜೀವಾನೆ ತಿಂತಾ ಇದ್ದಿ
ನಂಗ್ಯಾಕೆ ಬೇಕೀತ್ತಾ………
(ಚರಣ)
(Female)
ಕುಣಿಯೊ ತವಕ
ದಣಿಯೊ ತನಕ
ಎದೆಯ ಒಳಗೆ
ಅಳತೆ ಸಿಗದ ಪುಳಕ……
ನಾ ಗಾಳಿಪಟವಾಗಿ
ಹಾರಾಡೊ ಹೊತ್ತಲಿ
ನೀ ಹಕ್ಕಿಯಾಗಿ ನಂಗೆ
ಜೊತೆಯಾಗು ಬಾನಲ್ಲಿ……
(Male)
ಮೊದಲ ಬಾರಿ ಇಂತ ಗಾಳಿ
ನಾ ಯಾಕೆ ಈ ತರ ಹೋದೆ ತೇಲಿ
ಅರೆರೆ ಎಂತದೊ ರಗಳೆ ಆಗಿದೆ
ಇವಳ ನೋಡಿದ ಕೂಡಲೆ
ಹಸಿದ ಕಂಗಳ ಬಿಸಿಯ ದಾಳಿಗೆ
ಕರಗಿ ಹೋದೆನು ಮೆಲ್ಲಗೆ
(Female)
ಈ ಹವಾಮಾನ ಬಿಗುಮಾನ ತಂದು ಸೋಕಿದೆ
ಆ ಅನುರಾಗದನುವಾದ ನೀನೆ
(Male)
ನಿನ್ನ ನಯವಾದ ನೋಟಾನೆ ಬಲುಸ್ವಾದ
ನಾ ಹೇಗೆ ಮಾಡಲಿ ಹೇಳು ವಾದ…..


