Soundarya samara lyrics ( ಕನ್ನಡ ) – Kaddipudi – Super cine lyrics

 Soundarya samara lyrics – Kaddipudi



Soundarya samara song details 

  • Song – Soundarya Samara
  • Movie – Kaddipudi
  • Singer – Sonu Nigam
  • Music – V Harikrishna
  • Lyrics – Yogaraj Bhat

Soundarya samara lyrics in Kannada

ಸೌಂದರ್ಯ ಸಮರ ಲಿರಿಕ್ಸ್

ಸೌಂದರ್ಯ ಸಮರ 
ಸೋತವನೆ ಅಮರ
ಸೌಂದರ್ಯ ಸಮರ 
ಸೋತವನೆ ಅಮರ
ಕಳೆದು ಕೊಳ್ಳಲು ಬೇರೇನು ಇಲ್ಲ ಇಲ್ಲಿ
ಇರುವುದನೆ ಪಡೆದು ತಿರುಗಿ ಕಳೆದುಕೊಳ್ಳಲಿ 
ಕಳೆದು ಪಡೆದುಕೊಳ್ಳಿ

ಅಮಲುಗಣ್ಣಿಗೆ ಇವಳು ಸದಾ ಸುಂದರ ಗಾಂಧಾರಿ 
ಅದ ತಿಳಿದ ಮದನಾರಿ ಅತಿ ವಿರಾಹಿ ವ್ಯಾಮೋಹಿ
ಸುಡುತಿರುವ ಸಾರಂಗಿ ಮೃದು ಮಧುರ ಮಹಕಾಳಿ

ಈ ವದ್ದೆ ಈ ಮುದ್ದೆ ಕೋಲ್ ಮಿಂಚಿನ ಹೆಸರೇನು
ನೂರು ನರಕವ ಕಂಡ ಮುದ್ದು ಚತುರ ಸಖಿಯು
ನಟ್ಟ ನಡುವೆ ಬೀದಿಯಲ್ಲಿ ಬಿರಿದ ಡೇರೆ ಹೂ
ಸಿಕ್ಕರು ಸಿಗಲು ಇದ್ದರೂ ಇರಲು
ಇವಳದೆ ಹಗಲು ಇವಳದೆ ಇರುಳು 

ಸೌಂದರ್ಯ ಸಮರ ಸೋತವನೆ ಅಮರ 
ಸೌಂದರ್ಯ ಸಮರ ಸೋತವನೆ ಅಮರ
ಕಳೆದು ಕೊಳ್ಳಲು ಬೇರೇನು ಇಲ್ಲ ಇಲ್ಲಿ
ಇರುವುದನೆ ಪಡೆದು ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ

ಕಾಮನೆಯ ಜೇನಿಗೆ ಕವನೆ ಬೀಸಿದ ರಮಣಿ
ಮುಗಿಲ ಮನ ತೆಗೆದ ಕೊಬ್ಬಿ ನಿಂತ ಧರಣಿ
ರಸಿಕ ನಿಸ ರಾತ್ರಿಯ ಕುರುಡು ಬಿಡಿ ದೀಪ
ತಾರೆ ಬೆಳಕಿಗೆ ಇವಳ ಹೊಳೆವ ಮೈಯ್ಯ ಶಾಪ
ಕಣ್ಣು ಕಣ್ಣೈದಿಲಿಯೊ ಮತ್ಸರ್ಯ ಸೆಳೆಯೊ
ಉಕ್ಕು ಉನ್ಮದದ ದೇಹ ಮನ್ಮಥನ ಬಲೆಯೊ
ದೇಹ ದೇಗುಲ ಈ ದೇಹ ದೇಗುಲ 
ದೇಹ ದೇಗುಲ ಈ ದೇಹ ದೇಗುಲ 

ಸೌಂದರ್ಯ ಸಮರ ಸೋತವನೆ ಅಮರ
ಸೌಂದರ್ಯ ಸಮರ ಸೋತವನೆ ಅಮರ
ಕಳೆದು ಕೊಳ್ಳಲು ಬೇರೇನು ಇಲ್ಲ ಇಲ್ಲಿ
ಇರುವುದನೆ ಪಡೆದು ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ


Soundarya samara music video 

Leave a Comment

Contact Us