Shaane top agavle – Vijay Prakash Lyrics
Singer | Vijay Prakash |
About the song
▪ Song : SHAANE TOP AGVALE
▪ Singer: Swaravijayi VIJAY PRAKASH
▪ Lyricist: (Bharjari) CHETHAN KUMAR
▪ Film: SINNGA
▪ Music: DHARMA VISH
▪ Starcast: CHIRRANJEEVI SARJA, ADITI PRABUDEVA
▪ Director: VIJAY KIRAN
Lyrics
ಪರಪಂಚನೆ ಒಂದು ರೌಂಡು ಹಾಕೊಂಡ್ ಬಂದ್ರು
ಇಂತ ಚೆಲುವೆ ಸಿಗಕ್ಕಿಲ್ಲ
ಇವಳ ಅಂದ ವರ್ಣಿಸೋಕೆ
ಒಂದು ಜನ್ಮ ಸಾಲಕ್ಕಿಲ್ಲ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಮುತ್ತು ರತ್ನ ಹವಳಾನು ಮಂಕೇನೆ
ಇವಳು ಒಮ್ಮೆ ನಕ್ರೆ
ಡೌಟೇ ಇಲ್ಲ ಶಿವ ಡೌಟೇ ಇಲ್ಲ ಶಿವ
ಇವಳು ಮಂಡ್ಯ ಸಕ್ರೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಆ ಕಡಲ ಮುತ್ತಂಗೆ ಇವಳು
ಮಹಾರಾಣಿ ಗತ್ತಂಗೆ ಇವಳು
ಇವಳಂದ ನೋಡೋಕೆ ಕಾಮನಬಿಲ್ಲು ಬರ್ತೈತೆ
ಕಾವೇರಿ ಬಿರ್ಸೇನೆ ಇವಳು
ಆ ದಸರಾ ಸೊಗಸೇನೆ ಇವಳು
ಮಾತಾಡಲು ನೀರಿಂದ ಮೀನು ಮೇಲೆ ಬರ್ತಾವೆ
ಇವಳ ಅಂದ ಕಂಡು ತಲೆ ಕೆಡಿಸಿಕೊಂಡು
ಹುಡುಗುರ್ ಆಗ್ತಾರೆ ಲೂಸು
ಅಚ್ಚೆ ಹುಯ್ಸಿಕೊಂಡು ಎಲ್ಲ ಜಯಿಸಿಕೊಂಡು
ನಾನು ಕೊಡುವೆ ಒಂದು ರೋಸು
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ದ್ವನಿ ಕೇಳಲು ಉಗಾದಿ ಹಬ್ಬ
ನಕ್‌ಬುಟ್ರೆ ಸಂಕ್ರಾಂತಿ ಎಳ್ಳು
ಸುಮ್ನಿದ್ರು ಪಟಾಕಿ ಎದೆಯಲಿ ಸಿಡಿದಂಗಾಗ್ತೈತೆ
ಬೆಳದಿಂಗಳ ಹೊಳಪೇನೆ ಇವಳು
ನೊರೆ ಹಾಲಿನ ಬಿಳುಪೇನೆ ಇವಳು
ಬಂಗಾರ ನಾಚಿಸೋ ಮಗಳು
ಕಿನ್ನರಿ ಕುಲದವಳು
ಮನ್ಸು ಲೂಟಿ ಮಾಡಿ ಪ್ರೀತಿ ನಾಟಿ ಮಾಡಿ
ಹಗಲು ರಾತ್ರಿ ಕಾಡ್ತವ್ಳೇ
ಎಲ್ಲದಕ್ಕೂ ರೆಡೀ ಡೌಟೇ ಇಲ್ಲ ಬುಡಿ
ನನ್ನ ಹೆಂಡ್ರು ಇವ್ಳೇ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ