Categories
Shreya goshal

Ommomme nananu lyrics ( ಕನ್ನಡ ) – Kannadakkagi ondannu otti – super cine lyrics

Ommomme nananu – Shreya goshal Lyrics

Singer Shreya goshal

Ommomme nananu song details.

▪ Song: Ommome Nanagiga
▪ Movie: Kannadakkagi Ondannu Otti
▪ Singer: Shreya Ghoshal
▪ Music: Arjun Janya
▪ Lyrics: Yogaraj Bhat
▪ Banner: Edabidangi Talkies.
▪ Label: Pancharangi Audio

Ommomme nananu song lyrics in Kannada..

. ಒಮ್ಮೊಮ್ಮೆ ನನ್ನನ್ನು
ನಾನೇನೆ ಕೊಲೆಗಯ್ಯುವೆ..,?
ಇನ್ನೊಮ್ಮೆ ನಿನ ಕಂಡು
ನಾ ಚೂರು ಸರಿಹೋಗುವೆ…!
ನನ್ನ ನೀನು
ಎಂದೆಂದು ಕ್ಷಮಿಸಬೇಡ,,,
ಒಂದು ಕನಸು
ಜೀವಂತ ಉಳಿಸಬೇಡ….
ಅನುರಾಗದ ಅಪರಾಧಕೇ,
ನಿನ ಕೋಪವೇ ಕಿರು ಕಾಣಿಕೆ!

ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗಯ್ಯುವೇ…!

ಮಾತು ಆಡಲಾರೆ
ಕಣ್ಣಲ್ಲೇ ನೋಡಲಾರೆ…
ನಿನ್ನೆದುರು ಹೇಗೆ
ನಿಂತು ಕೊಳ್ಳಲಿ,,,
ಹೋಗು ನೀನು ಸಾಕು
ನಾನಿನ್ನು ಬೇಯಬೇಕು
ಈ ಏಕಾಂತದ ಬೆಂಕಿ ಊರಲ್ಲಿ…
ತಿಳಿಸಿದರುನು ಮುಗಿಯದ
ಕಥೆಯ ಕೇಳುವ ಸಹನೆ
ನಿನಗೇತಕೆ?
ಅನುರಾಗದ ಅಪರಾಧಕೇ,
ಕಡು ವಿರಹವೇ ಕಿರು ಕಾಣಿಕೆ….!

ಓ… ಒಂದೇ ಒಂದು ಬಾರಿ
ತೊಳಲ್ಲಿ ಅಳುವ ಆಸೆ.
ಬೇರೇನೂ ಬೇಡ
ನನ್ನ ಜೀವಕೇ..
ಎಲ್ಲೋ ಇರುವೆ ನಾನು
ಇನ್ನೆಲ್ಲೋ ಸಿಗುವೆ ನೀನೂ…
ಆ ಮೌನ ಸಾಕು
ಪೂರ್ತಿ ಜನ್ಮಕೇ!
ನೆನಪಿನ ಕವಿತೆ,
ನೆನಪಲೇ ಇರಲಿ,
ಮುಂದಕೇ ಹಾಡು ಇನ್ನೇತಕೆ?.
ಅನುರಾಗದ ಅಪರಾಧಕೆ,
. ಸಿಗಲಾರದು ಸ್ವರ ಮಾಲಿಕೆ…!

ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗಯ್ಯುವೇ…!
ಆಆ…. ಆಆ…. ಆಆಆ….

Leave a Reply

Your email address will not be published.