Categories
Arfaz ullal

Mounada doni Lyrics ( ಕನ್ನಡ ) – Arfaz ullal – super cine lyrics

Mounada doni – Arfaz Ullal Lyrics

Singer Arfaz Ullal

About the song

▪Album : Mounada Doni
▪Singer : Arfaz Ullal
▪Lyrics : Junaid Belthangady
▪ Producer : Pavankumar Rathod
▪Recordings : Kings Audio Station Kannur
▪Mixing & Mastering : Yusuf Kannur
▪Presents : Classic Media

Mounada doni lyrics

ಮೌನದ ದೋಣಿ

ನಿಂತಿಹಳು ಆ ಮೌನದ
ದೋಣಿಯಲ್ಲಿ
ಕಣ್ಣೀರು ಸೋರುವ
ಕೆನ್ನೆಯ ಒರಸುತಲಿ
ಹೇಳಿಹಳು ಆ ದುಃಖದ
ನಡುವಿನಲಿ
ಮರೆತುಬಿಡು ನನ್ನ
ಜಗದ ಎದುರಲ್ಲೇ

ಸಿಗುವನು ನಿನಗೆ
ಬೇರವನು
ಕಾಣದ ಪ್ರೀತಿಯ
ನೀಡುವನು
ಮರೆಯುವ ದಾರಿಯ.
ಮಾಡಿಬಿಡು
ಪ್ರಶ್ನಿಯ ಕೇಳದೆ ಹೊರಟುಬಿಡು

ನಿಂತಿಹಳು ಆ ಮೌನದ
ದೋಣಿಯಲ್ಲಿ
ಕಣ್ಣೀರು ಸೋರುವ
ಕೆನ್ನೆಯ ಒರಸುತಲಿ
ಮುಗಿಸಿಬಿಡು ನಿನ್ನಯ
ಅಧ್ಯಾಯ
ಮಾಡಿದೆ ಜೀವನದಿ ಅನ್ಯಾಯ
ನೆನಪು ಇಡು ನಾ ಸಾಧಿಸುವೆ
ಆ ಸಮಯದಿ ನೀಡುವೆ ಉತ್ತರ

ನಿನ್ನವರು ನಿನ್ನ ಕೇಳಿದರು
ನಿನ್ನ ಸಾಕುವ
ಯೋಗ್ಯತೆ ಇದೆ ಎಂದು
ತಿಳಿದಿಹರು ಅವರು ಇಂದು
ಪ್ರೀತಿಯ ಮೂಲ
ಹಣವೇ ಎಂದು
ಮೋಸವ ಮಾಡುವ
ಹೆಣ್ಣು ಮನ
ತಿಳಿಬೇಕು ಹುಡುಗನ ಮೌನ
ನಿಮ್ಮನೇ ನಂಬಿದ ಜೀವವದು
ಎಂದಿಗೂ ಪಯಣವ ನಿಲ್ಲಿಸದು

ನಿಂತಿಹಳು ಆ ಮೌನದ
ದೋಣಿಯಲ್ಲಿ
ಕಣ್ಣೀರು ಸೋರುವ
ಕೆನ್ನೆಯ ಒರಸುತಲಿ
ನಿನಗಾಗಿ ಮಾಡಿದ ತ್ಯಾಗ
ಕಳೆದಿಹೆನು ನನ್ನಯ ಉದ್ಯೋಗ
ನಡೆದಿಹಳು ಅವಳು ಅಲ್ಲಿ
ಮತ್ತೋರ್ವನ ಕೈಯ ಹಿಡಿಯುತಲಿ
ಹಠದಲ್ಲಿ ಗೆಲುವೂ ಇಲ್ಲ
ಸಾಧಿಸಿ ನಗುತಿರುವರು ಅವರೆಲ್ಲಾ
ಸೋತಿರುವೆ ನಾನು ಇಲ್ಲಿ
ನಿಮ್ಮಯ ಸಿರಿತನಕೆ ತಲೆ ಬಾಗಿ

ದೂರದ ಊರಿಗೆ
ಬಯಸಿದ ಪಯಣ
ಮನಸಲೇ ಸ್ಮಶಾನದ ಮೌನ
ಅವಳು ನೀಡಿದ ಪ್ರೀತಿಯ ಬಣ್ಣ
ಕತ್ತಲೆ ಕೋಣೆಯ ಯಜಮಾನ

ನಿಂತಿಹಳು ಆ ಮೌನದ
ದೋಣಿಯಲ್ಲಿ
ಕಣ್ಣೀರು ಸೋರುವ
ಕೆನ್ನೆಯ ಒರಸುತಲಿ
ಸಿಗುವನು ನಿನಗೆ ಬೇರವನು
ಕಾಣದ ಪ್ರೀತಿಯ
ನೀಡುವನು
ಮರೆಯುವ ದಾರಿಯ ಮಾಡಿಕೊಡು
ಪ್ರಶ್ನೆಯ ಕೇಳದೆ
ಹೊರಟುಬಿಡು

ನಿಂತಿಹಳು ಆ ಮೌನದ
ದೋಣಿಯಲ್ಲಿ
ಕಣ್ಣೀರು ಸೋರುವ
ಕೆನ್ನೆಯ ಒರಸುತಲಿ
ಹೇಳಿಹಳು ಆ ದುಃಖದ
ನಡುವಿನಲಿ
ಮರೆತುಬಿಡು ನನ್ನ
ಜಗದ ಎದುರಲ್ಲೇ

Leave a Reply

Your email address will not be published.