Kele cheluve song details
- Song : Kele cheluve
- Singer : Vijay Prakash, Anup bhandari, Deepika T
- Lyrics : Anup bhandari
- Movie : Rangitaranga
- Music : Anup bhandari
- Label : T series
Kele cheluve lyrics in kannada
ಕೇಳೇ ಚೆಲುವೇ
ನಿನ್ನ ಪಾದದಲ್ಲಿ ಧೂಳಾಗಿ ನೀ ನಡೆವಾಗ
ಕಚಗುಳಿ ನಾ ಇಡುವೆ….
ಕೇಳೆ ಚೆಲುವೇ,
ನೀನು ಮಿನುಮಿನು ಮಿನುಗೋ ತಾರೆ
ಝುಳು ಝುಳು ಹರಿಯುವ ರಸಜಲಧಾರೆ
ನನ್ನ ಕಣಕಣದಲ್ಲೂ ನೀನೇ
ನೀನೆ ತು೦ಬಿರುವೆ ಮನಸಾರೆ
ಬಳುಕಾಡಿ ನೀ ಬರುವಾಗ
ಸ್ವರ್ಗವೇ ನಾಚುತಿದೆ…
ಕೇಳೇ ಚೆಲುವೇ..
ಓ ಹ೦ಸಗಮನೆಯೇ
ನಿನ್ನ ಹ೦ಸದ ನಡಿಗೆಗೆ ನಡಿಗೆಗೆ
ಸೋತೆ ಸೆಳೆಯುವ ಮಧುರ ಮಾತಿನ ಸೊಗಡಿಗೆ ಬೆಡಗೀಗೆ…
ನೀನು ನಿ೦ತಲ್ಲೇ ನಿಲ್ಲದೇ ಅಲ್ಲಿ
ಕೆ೦ಪನೆ ಗಲ್ಲವ ಗಿಲ್ಲಿ
ನೋಟದಲೇ ಕೊಲುವಾಗ ತಲ್ಲಣವಾಗುತಿದೆ…
ಕೇಳೇ ಚೆಲುವೆ…
ಧಮನಿ ಧಮನಿ ಕರೆವಾ ಹೆಸರೇ ನೀ ತರುಣೀ…
ಕರೆವಾ ಹೆಸರೇ ನೀ ತರುಣೀ…
ಕೋಮಲಾ೦ಗಿಯೇ ನನ್ನ ಮನದೊಳು
ಇಣುಕಿದೆ ಕೆಣಕಿದೆ,
ಕೇಶರಾಶಿಯು ಇರುಳು ಆದರೆ
ಮೊಗದಲಿ ಕೆಣಕಿದೆ
ನಿನ್ನ ಮಾತಿನ ಪ್ರವಾಹದಲ್ಲಿ
ಸುಳ್ಳಿನ ಪ್ರಭಾವ ಚೆಲ್ಲಿ
ಹೊಗಳಿಕೆ ನೀ ಸುರಿವಾಗ
ನ೦ಬಲು ಆಗುವುದೇ…
ಕೇಳೇ ಚೆಲುವೆ…
ಹೇ…. ಏ…. ಹೈ…. ಹೇ……