Kappe Raaga song details :
Song | Kappe Raaga song ( Kumbara Song ) |
Singers | Rajesh Krishnan & Arundathi Vasishta |
Lyrics | Pradeep K Sastry |
Music | Ashwin P Kumar |
Label | Hombale films |
Kappe Raaga song lyrics in Kannada :
ಕುಂಬಾರ ಸಾಂಗ್ ಲಿರಿಕ್ಸ್
ಮೋಡದ ಚಪ್ಪರವ ಹಾಸಿ
ಹಸಿರು ಬೀಸಣಿಗೆ ಒಂದ್ತಾಸು ಬೀಸಿ
ಕಾದಿದೆಯೋ ಕಾಡೆಲ್ಲಾ ಮಳೆಗಾಗಿ
ಮಳೆಹನಿಯೇ ನೀ ಜೀವ ತರಲು
ಇರುಳಲ್ಲೇ ಅರಳಿದೆ ಈ ಹೊಸ ಬಾಳು
ಬಾ ಕುಂಬಾರ ಬಾ
ಬಾ ಕುಂಬಾರ ಬಾ
ಜಗಕೆಲ್ಲಾ ನಾನೇ ಕುಂಬಾರ
ತಾಯಿಗುಡಿ ಹಾಂಗ್ ಕಟ್ತೀನಿ
ನಮ್ಮ್ ಸೂರ
ಬೇರೆ ಪರಪಂಚ ನಾ ಕಾಣೆ
ಈ ಕಾಡ್ಬಿಟ್ ಏನ್ ಬೇಡ ನನ್ನಾಣೆ
ಇತ್ಲಾಗೆ ಹೂವು ಅತ್ಲಾಗೆ ಹಾವು
ನಮ್ ಕೈಲೈತಾ ಹೇಳು ಹುಟ್ಟು ಸಾವು
ನಮ್ಮ್ ದ್ಯಾವ್ರೆ ಕಾಯ್ದವ್ನೆ ಈ ಕಾಡ
ಕಿವಿಯಾಗ್ ಪಿಸುಗುಟ್ಟವನೆ
ಪ್ರೀತಿ ಹಾಡ
ಇಂದಾದರು ನೀ ಒಸಿ ಉಳಿಯೇ
ಮಗುವಾ ನೋಡದೆ ಹೋಗೋದು ಸರಿಯೇ?
ತಾಯಿ ಹೊಂಟೋದ್ರೇನು ಮರಿಸಿವನೆ?
ತಂದೆಗಿಲ್ಲ ಕೂಸೆ ನಿನ್ನ ಮೇಲೆ ಕರುಣೆ?
supercinelyrics.com
ಜಗಕೆಲ್ಲಾ ನಾನೇ ಕುಂಬಾರ
ತಾಯಿಗುಡಿ ಹಾಂಗ್ ಕಟ್ತೀನಿ
ನಮ್ಮ್ ಸೂರ
ಭೂತಾಯಿ ಕೊಟ್ಟೋಳೆ ಈ ಮಣ್ಣು
ನನ್ನ ಮಗು ಮೇಲೂ ಇಟ್ಟವಳೇ ಕಣ್ಣು
(music)
ಅವ್ವ.. ಬಿಟ್ಟೀವ್ನಿ ನಿಮ್ ತಾವ
ನಮ್ ಜೀವ
ಮಡಿಲಲ್ಲಿ ಹಾಕೊಂಡು ಮುತ್ತ ಇಕ್ಕವ್ವ
ಜಗಕೆಲ್ಲಾ ನಾನೇ ಕುಂಬಾರ
ಕಾಡ ಜಗಕೆಲ್ಲಾ ನಿಂದೆ ಸಿಂಗಾರ