Kalede hode naanu – Udit Haritas Lyrics
| Singer | Udit Haritas |
About the song
▪ Song : Kalede Hode Naanu
▪ Movie : chambal
▪ Singer – Udit Haritas
▪ Lyrics – Jayanth Kaikini
▪ Music Director – Poornachandra Tejaswi
Lyrics
ಕಳೆದೆ ಹೋದೆ ನಾನು ಹರಸುತ್ತ ನನ್ನನ್ನೇ
ಹಿಡಿದ ದಾರಿಯೊಂದು ಮರೆತಂತೆ ಊರನ್ನೇ
ಎದುರೇ ಕೂತ ಮಂದಿ ಬಿಟ್ಟಾಗ ಮಾತನ್ನೇ
ಉಳಿದೇ ಹೋಯ್ತು ನನ್ನ ಸಂಭಾಷಣೆ
ಕಳೆದೆ ಹೋದೆ ನಾನು ಹರಸುತ್ತ ನನ್ನನ್ನೇ
ಉಳಿದೇ ಹೋಯ್ತು ನನ್ನ ಸಂಭಾಷಣೆ
ಬೀಸೋ ಗಾಳಿಯೇ ಹೇಳು ಯಾರ ಸಾಕ್ಷಿಯು ನೀನು
ಸಂತೆ ನೋಡಲು ಬಂದ ಹಾದಿ ಹೋಕನೆ ನಾನು
ರೆಕ್ಕೆ ಇಲ್ಲದ ಹಕ್ಕಿ ಗೂಡ ಕಟ್ಟುವುದೇನು
ಯಾರು ಕದ್ದರೂ ಹೇಳು ಈಗ ನನ್ನ ಪಾಲಿನ ಬಾನು
ಬಿಡಲೇ ಇಲ್ಲ ನಾನೆಂದೂ ಕಂಡಂಥ ಕನಸನ್ನೇ
ಪುನಹ ಬೇಕೇ ಇನ್ನೊಂದು ಪ್ರಸ್ತಾವನೆ
ಕಳೆದೆ ಹೋದೆ ನಾನು ಹರಸುತ ನನ್ನನ್ನೇ
ಉಳಿದೇ ಹೋಯ್ತು ನನ್ನ ಸಂಭಾಷಣೆ
ಪ್ರತಿಯೊಂದು ಮುಂಜಾವು ನನ್ನನ್ನೇ ಮೀರೋಕೆ
ಹೊಸದಾಗಿ ಸಿಕ್ಕಂಥ ಅವಕಾಶವೇ
ಬೆಳಕಲ್ಲಿ ಕಂಡಂಥ ಪ್ರತಿ ಮೋರೆಯಲ್ಲೂನು
ನಗುವೊಂದೆ ನನಗಾಗಿ ಸಂದೇಶವೇ
ಮನಸಲ್ಲಿ ಕೂತಂತ ಮತ ಬೇಧದ ಕಸವ
ಗುಡಿಸೋದೆ ನಿಜವಾದ ಆಧ್ಯಾತ್ಮವೇ
ಮನಸಲ್ಲಿ ಕೂತಂತ ಮತ ಬೇಧದ ಕಸವ
ಗುಡಿಸೋದೆ ನಿಜವಾದ ಆಧ್ಯಾತ್ಮವೇ
ಕಳೆದೆ ಹೋದೆ ನಾನು ಹರಸುತ್ತ ನನ್ನನ್ನೇ
ಬದುಕೇ ನೀಡು ನಿನ್ನ ಆಶ್ವಾಸನೆ
ಬೀಸೋ ಗಾಳಿಯೇ ಹೇಳು ಯಾರ ಸಾಕ್ಷಿಯು ನೀನು
ಸಂತೆ ನೋಡಲು ಬಂದ ಹಾದಿ ಹೋಕನೆ ನಾನು
ರೆಕ್ಕೆ ಇಲ್ಲದ ಹಕ್ಕಿ ಗೂಡ ಕಟ್ಟುವುದೇನು
ಯಾರು ಕದ್ದರು ಹೇಳು ಈಗ ನನ್ನ ಪಾಲಿನ ಬಾನು
ಬಿಡಲೇ ಇಲ್ಲ ನಾನೆಂದೂ ಕಂಡಂಥ ಕನಸನ್ನೇ
ಪುನಹ ಬೇಕೆ ಇನ್ನೊಂದು ಪ್ರಸ್ತಾವನೆ


