Kaavaliga song lyrics in kannada – Bhairathi Ranagal

Kaavaliga song credits :

SongKaavaliga
SingersVijay Prakash
LyricsSai Sarvesh
MovieBhairathi Ranagal
MusicRavi Basrur
LabelAnand Audio

Kaavaliga song lyrics in Kannada :

ದಡವಿರದ ಕಡಲಿನಲಿ ಬುಡವಿರದಾ ಹಡಗುಗಳು
ಗುರಿ ಇರದೇ ನೆಲೆ ಸಿಗದೇ ಮುಳುಗುತಿವೆ
ಕೊನೆಯುಸಿರು ಎಳೆದಿರುವ ಭರವಸೆಗೆ ಮರುಜೀವ
ತುಂಬುತಿರೋ ಅಂಬಿಗನಾ ಕಾಣುತಿವೆ
ದುಗುಡಗಳಾ ಆರ್ಭಟಕೆ ಸುಡುತಿರುವ ಸಂಕಟಕೆ
ತಡೆಯಾಜ್ಞೆ ತಂದವನು ಯಾರಿವನು
ಗರಿಗೆದರಿ ಹೆದರಿಸುವ ವಿಧಿಯನ್ನೇ ಅಡಗಿಸಲು
ಕಂಕಣದಿ ನಿಂತವನು ಯಾರಿವನು

ಕಾವಲಿಗ ಕಾವಲಿಗೆ ಕಂಬನಿಗೆ ಕಾವಲಿಗ
ಕಾವಲಿಗ ಕಾವಲಿಗ ನಂಬಿಕೆಗೆ ಕಾವಲಿಗ

ಕಾಳಜಿಯ ಸೂಜಿ ದಾರದಲಿ
ಒಡೆದ ಬದುಕ ಹೊಲಿಯೋ ಕಾರ್ಮಿಕ
ಮಾಯದಿರೋ ಮನದ ಗಾಯಕೆ
ಮಮತೆ ಮದ್ದು ಹಚ್ಚೋ ಸೇವಕ
ಅಂತ್ಯದ ವ್ಯಾಕರಣ ಕೈಲಿರೋ ಜೀವನ
ಕ್ಷೇಮದಿ ಪೊರೆವನು ಹರಸಾಹಸಿ ಯಾರಿವನು

ಕಾವಲಿಗ ಕಾವಲಿಗೆ ಕಂಬನಿಗೆ ಕಾವಲಿಗ

ದೀನರಿಗೆ ನೆರಳು ಕಲ್ಪಿಸುವ
ದೀಕ್ಷೆ ಪಡೆದ ದಕ್ಷ ಸೇನಾನಿ
ಅಂಜಿಕೆಯ ಭಾರ ಕೆಳಗಿಳಿಸಿ
ಆತ್ಮಬಲವ ನೀಡೋ ಅನುದಾನಿ
ಕಣ್ಮರೆಯಾಗಿರೋ ನೀರಜ ನಗುವನು
ಮರಳಿ ತಂದವನು ಪರಿಪಾಲಕ ಯಾರಿವನು

ಕಾವಲಿಗ ಕಾವಲಿಗೆ ಕಂಬನಿಗೆ ಕಾವಲಿಗ
ಕಾವಲಿಗ ಕಾವಲಿಗ ನಂಬಿಕೆಗೆ ಕಾವಲಿಗ
ಕಾವಲಿಗ ಕಾವಲಿಗೆ ಕಂಬನಿಗೆ ಕಾವಲಿಗ
ಕಾವಲಿಗ ಕಾವಲಿಗ ನಂಬಿಕೆಗೆ ಕಾವಲಿಗ

Contact Us