Ee mounave lyrics – Amma i love you
Ee mounave song details
- Song : Ee mounave
- Singer : Jyotsna Radhakrishna
- Music : Gurukiran
- Lyrics : Kaviraj
- Movie : Amma i love you
Ee mounave lyrics in Kannada
ಈ ಮೌನವೆ ಲಿರಿಕ್ಸ್
ಈ ಮೌನವೆ ಮಾತಾಡಿದೆ
ನಾ ಹೇಳಲು ಇನ್ನೇನಿದೆ
ಈ ಜೀವ ಕೈ ಚಾಚಿ
ನಿನ್ನನ್ನೇ ಬೇಡಿದೆ
ಒಂಚೂರು ಪ್ರೀತಿನ ನೀ ನೀಡ ಬಾರದೆ
ಈ ಮೌನವೆ ಮಾತಾಡಿದೆ
ನಾ ಹೇಳಲು ಇನ್ನೇನಿದೆ
ಬಾ ಒಮ್ಮೆ ನನ್ನನ್ನು ಆಲಂಗಿಸು
ನಿನ್ನಲ್ಲಿ ನನ್ನನ್ನು ನೀ ಬಂಧಿಸು
ಆರಂಭ ನೀನೇ ನೀನೆ ಕೊನೆ
ಈ ಜೀವವಿನ್ನು ನಿನಗರ್ಪಣೆ
ಈ ಮೌನವೆ ಮಾತಾಡಿದೆ
ನಾ ಹೇಳಲು ಇನ್ನೇನಿದೆ
ಬೇಕಿಲ್ಲ ಯಾವುದೆ ಆಶ್ವಾಸನೆ
ನನ್ನಾಸೆ ಎಲ್ಲವೂ ನೀನೊಬ್ಬನೆ
ನೀನೆಲ್ಲೊ ಅಲ್ಲೆ ನನ್ನ ಖುಷಿ
ನಾ ಬರುವೆ ನಿನ್ನ ಹಿಂಬಾಲಿಸಿ
ಈ ಮೌನವೆ ಮಾತಾಡಿದೆ
ನಾ ಹೇಳಲೂ ಇನ್ನೇನಿದೆ
ಈ ಜೀವ ಕೈ ಚಾಚಿ
ನಿನ್ನನ್ನೇ ಬೇಡಿದೆ
ಒಂಚೂರು ಪ್ರೀತಿನ
ನೀ ನೀಡ ಬಾರದೆ