Amma ninna lyrics ( ಕನ್ನಡ ‌) – Thayige thakka maga

Amma ninna song details

  • Song : Amma ninna
  • Singer : Narayan Sharma
  • Lyrics : Shashank
  • Movie : Thayige thakka maga
  • Music : Judah Sandhy
  • Label : Anand audio

Amma ninna lyrics in Kannada

ಅಮ್ಮ ನಿನ್ನ ಸಾಂಗ್ ಲಿರಿಕ್ಸ್

ಅಮ್ಮ ನಿನ್ನ ಮಗನೆಂಬ ಹೆಮ್ಮೆ
ಬೇಕು ನನಗೆ ಪ್ರತಿ ಜನ್ಮಕೂ

ಅಮ್ಮ ನಿನ್ನ ಮಗನೆಂಬ ಹೆಮ್ಮೆ
ಬೇಕು ನನಗೆ ಪ್ರತಿ ಜನ್ಮಕೂ
ಸರಿ ಸಾಟಿ ಇರದ ನಿನ್ನ ಪ್ರೀತಿ
ಸವಿಯ ಬೇಕು ಎಂದೆದಿಗೂ
ಅಮ್ಮ ನಿನ್ನ ಮಡಿಲಲ್ಲಿ ಜಾಗ
ನೀಡು ನನಗೆ ಪ್ರತಿ ಜನ್ಮಕೂ
ನಿನ್ನ ಪಾಠ ಶಾಲೆ ವಾತ್ಸಲ್ಯ ಮಾಲೆ
ಬೇಕು ಎಂದೆದಿಗೂ ನೀನೆ ನಾನೆಂದಿಗೂ

ಏನೆ ನೋವನ್ನ ನಾ ನುಂಗಲೂ
ಕೂಗೊ ಪದವೇನೆ ನೀನಲ್ಲವೆ
ನಿನ್ನೆಲ್ಲಾ ನೋವಿನ ದಯದಿಂದ ತಾನೆ
ನನ್ನೆಲ್ಲಾ ನಗುವಿನ ಕ್ಷಣವೆಲ್ಲವೂ
ನಿನ್ನ ಕೈ ತುತ್ತ ಋಣ ಭಾರ ನನ್ನ ಮೇಲಿದೆ
ತೀರೋದು ಉಳಿಯೋದು ನಿನ್ನ ಕೈಲಿದೆ

ಅಮ್ಮ ನಿನ್ನ ಮಗನೆಂಬ ಹೆಮ್ಮೆ
ಬೇಕು ನನಗೆ ಪ್ರತಿ ಜನ್ಮಕೂ

ಅಮ್ಮ ನೀನೆ ಕೊಟ್ಟ ಜೀವ
ನಿನ್ನ ಕಾಯೊ ಸಲುವಾಗಿದೆ
ನಿನ್ನ ಹೆಸರ ಜೊತೆಗೆ ತಾನೆ
ನನ್ನ ಉಸಿರು ಬೆರೆತಾಗಿದೆ
ಜಗ ಪೂಜಿಸಲಿ ನೂರಾರು ಶಿಲೆಯಾದರೂ
ನೀನೆನೆ ಎಂದೆಂದೂ ನನ್ನ ದೇವರು

ಅಮ್ಮ ನಿನ್ನ ಮಗನೆಂಬ ಹೆಮ್ಮೆ
ಬೇಕು ನನಗೆ ಪ್ರತಿ ಜನ್ಮಕೂ ಸರಿ ಸಾಟಿ ಇರದ ನಿನ್ನ ಪ್ರೀತಿ ಸವಿಯ ಬೇಕು ಎಂದೆಂದಿಗೂ
ಅಮ್ಮ ನಿನ್ನ ಮಡಿಲಲ್ಲಿ ಜಾಗ ನೀಡು ನನಗೆ ಪ್ರತಿ ಜನ್ಮಕೂ ನಿನ್ನ ಪಾಠ ಶಾಲೆ ವಾತ್ಸಲ್ಯ
ಮಾಲೆ
ಬೇಕು ಎಂದೆಂದಿಗೂ ನೀನೆ ನಾನೆಂದಿಗೂ ನೀನೆ ನಾನೆಂದಿಗೂ

Amma ninna song video :

Leave a Comment

Contact Us