Categories
Karthik Saragur

Adhara udara lyrics ( ಕನ್ನಡ ) – Bheemasena Nalamaharaja – super cine lyrics

 Adhara udara lyrics – Bheemasena Nalamaharaja



Adhara udara song details 


  • Song : Adhara udara
  • Singer : Karthik Saragur
  • Lyrics : Karthik Saragur
  • Movie : Bheemasena Nalamaharaja
  • Music : Charan Raj

Adhara udara lyrics in Kannada 


ಅಧರ-ಉದರ 


ಒಂದೊಂದು ಅನ್ನದ ಕಾಳಿಗೂ
ಎರಡೆರಡು ಮುಖ ಉಂಟು 
ಬೆಂದತ್ತು ತಿನ್ನೋನ ಹಾಗೆ 
ಬೇಯಿಸಿ ಬಡಿಸುವವನ ಹೆಸರು ಉಂಟು 
ಅರಿತರಿತ ಸುಖ ಉಂಟು 
ಮರೆತೆಯೋ ಬಲೂ ಕಗ್ಗಂಟು 
ಅರಿತರಿತ ಸುಖ ಉಂಟು 
ಮರೆತೆಯೋ ಬಲೂ ಕಗ್ಗಂಟು
ಈ ಸಂಬಂಧದ ಅಂತರವೆಷ್ಟು
ಅಧರಕ್ಕೂ ಉದರಕ್ಕೂ ಇರೋವಷ್ಟು
ಹೇ ಅಧರಕ್ಕೂ ಉದರಕ್ಕೂ ನೋವೆಷ್ಟು

ಒಂದೊಂದು ಕಥೆಯ ಹಿಂದೆಯೂ
ಹತ್ತಾರು ಪಾತ್ರಗಳುಂಟು
ಅವರವರ ವೇಷ ಅದೇನೆ ಇರಲಿ 
ನಟಿಸೋ ಅನಿವಾರ್ಯತೆ ಉಂಟು 
ಬದುಕಿ ನಡೆದೆಯೋ ಬಾಳಿದು ಉಂಟು 
ಎಡವಿ ಬಿದ್ದೆಯೋ ಬರೀ ನೋವಿನ ಗಂಟು
ತೂಗುವ ಈ ಸೇತುವೆಗೆ 
ಕಂಬಗಳು ಎಷ್ಟೆಷ್ಟೂ
ಅವರವರ ನೆನಪುಗಳು ಇರೋವಷ್ಟು

ಒಂದೊಂದು ಅಡಿಗೆಯನ್ನು ಮಾಡಲು 
ಅದರದರದೆ ಅಳತೆ ಉಂಟು 
ಇಂಗು ತೆಂಗು ಎಣ್ಣೆ ಬೆಣ್ಣೆ ಸಂಗಡ
ಪ್ರೀತಿಗೂ ಕೆಲಸ ಉಂಟು 
ಅರೆಬೆಂದರೆ ಹಳಸು ಕವಟು
ಬೆಂದರೆ ಮಾತ್ರ ಅಮೃತ ಉಂಟು 
ಈ ನಳಪಾಕಕೆ ಏನ್ಯೇನು ಎಷ್ಟೆಷ್ಟು ಎಷ್ಟೆಷ್ಟು
ಸಿಹಿ ಕಹಿ ಒಗರು ಎಷ್ಟೆಷ್ಟು
ಕಾರ ಹುಳಿ ರವಷ್ಟು
ಉಪ್ಪು ಮಾತ್ರ ರುಚಿಗೆ ತಕ್ಕಷ್ಟು 

ಅಧರಕ್ಕೂ ಉದರಕ್ಕೂ ಇರೋವಷ್ಟು
ಅಧರಕ್ಕೂ ಉದರಕ್ಕೂ ಇರೋವಷ್ಟು
ಹೇ ಅಧರಕ್ಕೂ ಉದರಕ್ಕೂ ಇರೋವಷ್ಟು
ಒಂದೊಂದು ಅನ್ನದ ಕಾಳಿಗೂ
ಎರಡೆರಡು ಮುಖ ಉಂಟು

Adhara udara lyrics video : 

Leave a Reply

Your email address will not be published. Required fields are marked *

Contact Us