Huttida Ooranu Song Lyrics – Parapancha Movie

Huttida Ooranu Song Details

Huttida Ooranu” from the Kannada movie Parapancha is a soulful track sung and composed by Veer Samarth. Featuring meaningful lyrics by Yogaraj Bhat, the song beautifully reflects nostalgia and emotional connection to one’s roots. Released under Anand Audio, “Huttida Ooranu” is loved for its heartfelt melody and relatable theme among Kannada music fans.

SongHuttida Ooranu
SingerVeer Samarth
LyricsYogaraj Bhat
MovieParapancha
MusicVeer Samarth
LabelAnand Audio

Huttida Ooranu Song Spotify

Huttida Ooranu Song Lyrics In Kannada

ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ
ಇನ್ನೇನು ಬಿಡುವುದು ಬಾಕಿ ಇದೆ
ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ
ಊರ ದಿಕ್ಕಿನ ಗಾಳಿ ತಂದಿದೆ
ಒಂದು ಕಾಣದ ಕೂಗನ್ನು,
ತವರಿಗಿಂತ ಬೆಚ್ಚನೆ ಜಾಗ
ಹೇಳು ಎಲ್ಲಿದೆ ನಿಂಗಿನ್ನೂ
ನಿಂಗಿದೂ ಬೇಕಿತ್ತಾ ಮಗನೇ
ವಾಪಸ್ಸು ಹೊಂಟ್ಹೋಗು ಶಿವನೇ
ಬ್ಯಾಗು ಹಿಡೀ ಸೀದಾ ನಡಿ,
ಬೋರ್ಡು ನೋಡಿ ಬಸ್ಸು ಹಿಡಿ

ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ
ಇನ್ನೇನು ಬಿಡುವುದು ಬಾಕಿ ಇದೆ
ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ

ಬ್ಯಾರೆಲ್ಲೆ ಇದ್ದರೂ ಇದ್ದು ಸತ್ತಂಗೆ,
ಊರಲ್ಲೇ ನಿನ್ನ ಉಸಿರಿದೆ
ನಿನ್ನೂರ ನಡುವಿನ ಆಲದ ಮರದಲಿ
ನೀ ಕೆತ್ತಿ ಬಂದ ಹೆಸರಿದೆ
ಕಿತ್ಹೋದ ಕಾಸಿಗೆ ಕಿತ್ತಾಡೋ ಕೀರ್ತಿಗೆ
ಹೈವೇಲಿ ಲಾರಿ ಹಿಡಿದು ನೀ ಬಂದೆ,
ಪಟ್ಟಣಕೆ ಬಂದು ಸಗಣಿಯ ಮ್ಯಾಲಿನ
ಸಂಕ್ರಾತಿ ಹೂವಿನಂತೆ ನೀನಾದೆ

ಹಬ್ಬಕ್ಕೆ ಹಳೇ ಹುಡುಗಿ ಬರುತಾಳೋ
ಮಗನಿಗೆ ನಿನ್ನ ಹೆಸರಿಟ್ಟಾಳೋ
ಈ ಬಾರಿ ಒಳ್ಳೆ ಫಸಲಂತೇ,
ಅತ್ತಿಗೆ ತಿರುಗಾ ಬಸಿರಂತೇ
ನಿಮ್ ಮಾವ ಎಲೆಕ್ಷನ್ ಗೆದ್ನಂತೇ,
ದೊಡ್ಡಪ್ಪ ಸಿಗರೇಟ್ ಬಿಟ್ನಂತೆ
ಅತ್ತೆಯ ಮಗಳು ಓದ್ತಾಳೋ,
ಆಗಾಗ ನಿನ್ನ ನಂಬರ್ ಕೇಳ್ತಾಳೋ
ನಿಂಗೂ ಡಿಮ್ಯಾಂಡಿದೇ ಮಗನೇ,
ವಾಪಸ್ಸು ಹೊಂಟ್ಹೋಗು ಶಿವನೇ

ಬ್ಯಾಗು ಹಿಡೀ ಸೀದಾ ನಡಿ,
ಬೋರ್ಡು ನೋಡಿ ಬಸ್ಸು ಹಿಡಿ
Supercinelyrics.com

ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ
ಇನ್ನೇನು ಬಿಡುವುದು ಬಾಕಿ ಇದೆ
ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ

ಇದ್ದಕ್ಕಿದಂತೆ ಏನೇನೋ ಅನ್ನಿಸಿ
ಕಣ್ಣು ತುಂಬಿ ಕೊಳ್ಳೋದ್ಯಾಕೆ
ಅಪ್ಪ ಅಮ್ಮ ಇಬ್ರೂ ಹತ್ರ ಕುಂತುಕೊಂಡು
ಅಳಬ್ಯಾಡ ಅಂದಂಗಾಗೊದ್ಯಾಕೆ
ದಿಕ್ಕುಗೆಟ್ಟವನು ಕಾಲಿದ್ದು ಹೆಳವ,
ಎತ್ಲಾಗೆ ಹೋದರೂ ಒಂದೇ ನೀನೂ
ಎಲ್ಲಿಂದ ಬಂದೆಯೋ ಅಲ್ಲೇ ಹುಡುಕಾಡು
ದುರ್ಬಿನು ಹಾಕಿಕೊಂಡು ನಿನ್ನೇ ನೀನು

ಚಡ್ಡಿ ದೋಸ್ತ್ರೆಲ್ಲಾ ನಿನ್ನಾ ಬೈತಾರೆ,
ಪಕ್ಕದ ಮನೆ ಹುಡುಗಿ ಕಾಯ್ತಾಳೆ
ಕಲಿಸಿದ ಮೇಷ್ಟ್ರು ಹೋಗ್ಬಿಟ್ರೂ,
ಮತ್ತಜ್ಜನ ಮನೆ ಮಾರ್ಬಿಟ್ರೂ
ತಂಗಿಯ ಗಂಡ ಲಾಸಾಗೋದಾ,
ಅಣ್ಣನ್ಗೆ ಖಾಯಿಲೆ ಮೊನ್ನೆಯಿಂದಾ
ಅಪ್ಪನ್ಗೆ ಉಸಿರೇ ಸಾಕಾಗಿದೆ,
ಅವ್ವನ್ಗೆ ನೆನಪೇ ನಿಂತ್ಹೋಗಿದೆ
ಕಂಡಿಸನ್ ಹಿಂಗಿದೇ ಮಗನೇ,
ವಾಪಸ್ಸು ಹೊಂಟ್ಹೋಗು ಶಿವನೇ

ಬ್ಯಾಗು ಹಿಡೀ ಸೀದಾ ನಡಿ,
ಕಣ್ಣೊರೆಸಿ ಬಸ್ಸು ಹಿಡಿ

ಬ್ಯಾಗು ಹಿಡೀ ಸೀದಾ ನಡಿ,
ಕಣ್ಣೊರೆಸಿ ಬಸ್ಸು ಹಿಡಿ

Huttida Ooranu Song Lyrics In English

Huttida Ooranu bittu banda mele,
Innenu biduvudhu baki idhe,
Madodella maadi alabeda paradesi,
Eddelu kone bassu timaagidhe..
Oora dikkina gali thandidhe,
Ondhu kaanadha kugannu,
Thavarigintha becchane jaaga,
Helu ellidhe ninginnu..
Ningidhu bekittha magane,
Vapassu hontogu shivane,
byaagu hidi seeda nadi,
Boardu nodi, bassu hidi,
Huttida Ooranu bittu banda mele,
Innenu bidivudhu baki idhe,
Madodella madi alabeda paradesi,
Eddelu kone bassu timaagidhe,

Byarelle iddharu iddhu satthange,
Ooralle ninna usiridhe,
Ninnura naduvina aladha maradhali,
Nee ketthi bandha hesaridhe,
kitthoda kasige, kitthodha keerthige,
Highwayli lari hididu nee bandhe,
Pattanakke bandhu saganiya melina,
Sankraanthi hoovanthe neenaadhe,
Habbakke hale hudugi barathaalo,
Maganige ninna hesaru ittaalo
Ee bari olle fasalanthe
Atthige thirgaa basiranthe
Nimmaava election gednanthe
Doddappa cigarette bitnanthe
Attheya magalu odtthaalo
Agaga ninna number kelthalo
Ningu demandidhe magane
Vapassu hontogo shivane
Byagu hidi, seedha nadi,
Boardu nodi, bassu hidi,
Huttida Ooranu bittu banda mele,
Innenu biduvudhu baaki idhe,
Madodella madi alabeda paradesi,
Eddelu kone bassu timaagidhe
Supercinelyrics.com

Iddakkiddanthe eneno annisi
Kannu thumbikollodyake?
Appa amma ibru hatra kunthukondu
Alabyada andang agodyaake?
Dikkugettavanu, Kaaliddu helava
Ethlage hodharu ondhe neenu
Ellindha bandheyo alle hudukaadu
Durbeenu hakikondu ninne neenu
Chaddidosthella ninna baythaare,
Pakkada mane hudugi kaaythale
Kalisidha meshtru hogbitru,
Mutthajjana mane marbitru
Thangiya ganda loss aagodha,
Annange kaayile monneyindha
Appange usire sakagidhe
Avvange nenape ninthogidhe
Condition Hinngidhe magane,
Vapassu hontogu shivane,
Byagu hidi, seedha nadi,
Kannoresi, bassu hidi..
Byagu hidi, seedha nadi,
Kannoresi, bassu hidi..

Leave a Comment

Contact Us