Hrudaya – Vasu Dixit , Inchara Rao Lyrics
| Singer | Vasu Dixit , Inchara Rao |
About the song
▪ Movie : Mundina Nildana
▪ Song : Hrudaya
▪ Music : Swarathma
▪ Vocals : Vasu Dixit & Inchara Rao
▪ Lyrics : Skanda S
HRUDAYA lyrics Mundina nildana
ಸಂಜೆಯ ಸೂರ್ಯನ ಕಾಂತಿಗೆ
ಮೋಡವು ಮರೆಮಾಡಿ ನಿಂತಿದೆ
ನೆನ್ನೆ ನಾಳೆಗಳ ನಡುವೆ ಚಲಿಸುತಿದೆ ಹೃದಯ
ನೋಡಲಿ ಹೇಗೆ ನಾ ನಿನ್ನನೂ
ಏನೋ ಕಾಡಿದೇ ನನ್ನ ಮನಸನೂ
ನೂರು ಪ್ರಶ್ನೆಗಳ ಒಮ್ಮೆ ಕೇಳುತಿದೇ ಹೃದಯ?
ಲೋಕವೇ ನಿನ್ನ ಬಯಕೆ ಏನು
ಏನಿದು ನಿನ್ನ ಆಟವು
ಏಕೆಂದು ನಾ ಕೇಳಲಾರೆ
ಏನನ್ನು ನಾ ಅರಿಯೆನೂ
ಆತಂಕಕ್ಕೆ ನೆಮ್ಮದಿಯಾಗು
ಬಿಸಿಲಿಗೆ ಬೆಳೆದಿಂಗಳಾಗು ನೀ
ಮೋಡದ ಮರೆಯೂ ಸರಿದಿದೆ
ಬೆಳಕಿನ ಹೊಳೆಯೂ ಹರಿದಿದೆ
ಇಂದಿನ ಸಂತಸದಿ ನಾಳೆ ಮರೆಯುತಿದೆ ಹೃದಯ..


