Halavaaru song details
- Song : Halavaaru
 - Singer : Haricharan , Sahithi
 - Lyrics : Kaviraj
 - Movie : Buguri
 - Music : Micky J Meyar
 - Label : Anand audio
 
Halavaaru lyrics in Kannada
ಹಲವಾರು ಸಾಂಗ್ ಲಿರಿಕ್ಸ್
ಹಲವಾರು ಹಾದೀಲಿ ಎದುರಾದರೂ
ಕನಸಲ್ಲಿ ಕಾಡಿಲ್ಲ ಯಾರೊಬ್ಬರೂ 
ಮನಸನ್ನು ತಾಕಿದ ಹೃದಯವ ಜೀಕಿದ
ಕನಸಿಗೆ ನೂಕಿದ ಹುಡುಗನು ನೀನೆ ನೀನೆ 
ಬರುತಿರೆ ನೀ ಬಳಿ ಕಚಗುಳಿ ಬೆನ್ನಲಿ
ಹಿತಕರ ಹಾವಳಿ 
ಕೊಡುವುದು ನೀನೆ ನೀನೆ 
ನೀನೆನೆ ನಿನ್ನ ಪ್ರೇಮಿ ನಾನೆ
ನೀನೇನೆ ನನ್ನ ಭೂಮಿ ನೀನೆ
ನೀನೆನೆ ನನಗೆ ಎಲ್ಲಾ ನೀನೆ ನೀನೇನೆ
ಹಲವಾರು ಹಾದೀಲಿ ಎದುರಾದರೂ
ಕನಸಲ್ಲಿ ಕಾಡಿಲ್ಲ ಯಾರೊಬ್ಬರೂ
ನೀ ಪರಿಚಯ ಆದ ನಂತರ 
ನೀ ಪರಿಚಯ ಆದ ನಂತರ 
ಈ ಬದುಕಿದು ಎಂತ ಸುಂದರ 
ನಿನ್ನ ಕಂಡ ದಿನ ನಸು ನಕ್ಕ ಕ್ಷಣ 
ಸಿಹಿ ಹಂಚೋಕೆ ನಾ ನಿಂತೆ ಈ ಲೋಕಕೆ
ಎದೆ ಗುಡಿಯಲ್ಲಿ ಜೋಕಾಲಿ ಜೀಕೋಕೆ ಬಂದಂತ 
ತಂಗಾಳಿ ನೀನು ಓ ಪ್ರೇಮವೆ
ನೀನೇನೆ ನಿನ್ನ ಪ್ರೇಮಿ ನಾನೆ 
ನೀನೇನೆ ನನ್ನ ಭೂಮಿ ನೀನೆ 
ನೀನೇನೆ ನಂಗೆ ಎಲ್ಲಾ ನೀನೆ 
ನೀನೇನೆ
ನಾ ಕ್ಷಮಿಸೇನು ಇಂದು ನಿನ್ನನ್ನು
ನಾ ಕ್ಷಮಿಸೇನು ಇಂದು ನಿನ್ನನ್ನು
ನೀ ಕನಸಿನ ಲೂಟಿ ಕೋರನು
ನಿನ್ನ ಕಣ್ ಅಂಚಲಿ ದಿನ ದೀಪಾವಳಿ 
ಹೊಸ ರಂಗದೆ ಗುಂಗದೆ ನೀ ನನ್ನಲಿ
ನಿನ್ನ ನೋವಲ್ಲಿ ನಲಿವಲ್ಲಿ ಹೋದಲ್ಲಿ ಬಂದಲ್ಲಿ 
ಎಂದೆಂದೂ ನಿನ್ನ ಜೊತೆ ನಿಲ್ಲುವೆ
ನೀನೆನೆ ನಿನ್ನ ಪ್ರೇಮಿ ನಾನೆ 
ನೀನೇನೆ ನನ್ನ ಭೂಮಿ ನೀನೆ 
ನೀನೇನೆ ನಂಗೆ ಎಲ್ಲಾ ನೀನೆ ನೀನೇನೆ
ನೀನೇನೆ ಹೇಹೇ
ನೀನೇನೇ ನಿನ್ನ ಪ್ರೇಮಿ ನಾನೆ 
ನೀನೇನೆ ನಂಗೆ ಎಲ್ಲಾ ನೀನೆ ನೀನೇನೆ
		
