Adu Chandada Kaala Song Details:
Song | Adu Chandada Kaala |
Singer | Vijayaprakash |
Lyrics | V Nagendra Prasad |
Movie | Adu chandada kaala |
Music | Raghavendra V |
Label | A2 Music |
Adu Chandada Kaala Song Spotify:
Adu Chandada Kaala Song Lyrics In Kannada:
ತಂದಾನಿ ತಾನೇ ತಾನಾನೇ
ತಂದಾನಿ ತಾನೇ ತನಾನನನೆ
ಹೇ ತರಾರಿ ತಾರೆ ತನನಾನ
ತಂದಾನಿ ತಾನಾನ..
ಅದು ಚಂದದ ಕಾಲ ಒಂದು ಅಂದದ ಕಾಲ
ಹಿತವಾದ ನೆನಪು ಬೊಗಸೆ ತುಂಬಿ ಬೆಳೆಸಿದ ಕಾಲ
ಮರಕೋತಿ ಆಟ ಆಡಿ ಬಲು ತರಲೆ ತೀಟೆ ಮಾಡಿ
ಮರಳಲ್ಲೇ ಮನೆಯ ಕಟ್ಟಿದ ಕಾಲ
ಮತ್ತೆ ಸಿಗುವುದೇನೋ ಸಾಲ
ಮುಗ್ದವಾದ ಬಾಲ್ಯ ಕಾಲ
ಎಂದು ಮರೆಯಲಾರೆ ಸ್ಲೀಟಿನ ಚೀಲ
ಹಳೆ ಗೆಳೆಯರೆಲ್ಲ ದೂರ
ಹಳೇಬೀದಿ ಈಗ ದೂರ
ಕಳೆದಿರುವುದು ಎಳೆ ಮನಸಿನ ಹಳೆ ಹೃದಯ
ಪ್ರತಿ ಮನುಜ ನೆನೆಯುವ ನೆನಪಿನ ಕಾಲ ಅದುವೇ
ನಿಷ್ಕಲ್ಮಶ ವಾತ್ಸಲ್ಯ ಎಲ್ಲಿ ಹೊಯ್ತೋ
ಹೇ ನಂಗೆ ದೃಷ್ಟಿ ತೆಗೆದ ಜೀವ
ನನ್ನ ಭಯವ ಕಳೆದ ಜೀವ
ಮರೆಯಾಗಿ ಹೋದ ನೋವು ಅಳಿಯದು
ಒಂದು ಪ್ರೇಮ ಕಥೆಯ ನೋಡಿ
ಆ ಜೋಡಿಯನ್ನು ಕಾಡಿ
ನಗುತಿದ್ದ ಕಾಲ ಎಂದು ಮರೆಯದು
ಬಳಪ ತಿಂದಿದ್ದೆಲ್ಲ ಮರೆಯೋ ಮಾತಿಲ್ಲ
ಬಾಲ್ಯ ಇದ್ದ ಶಾಲೆಗೀಗ ಹೋಗೋ ಹಂಬಲ
ಜೇಬಲ್ಲಿಗ ಕೋಟಿ ಲೆಕ್ಕ ಇಲ್ಲ
ಅಪ್ಪನ್ ಜೇಬಲ್ ಕದ್ದ ಕಾಸಿನ ಮುಂದೆ ಏನಿಲ್ಲ
ನಿಂಬೆ ಹುಳಿ ಕೊಟ್ಟಿರೋ ಸುಖನ
ಪೇಪರ್ ಮೆಂಟಿನ ಸಿಹಿಯ ಮಜಾನ
ಈ ಜನ್ಮವು ಮುಗಿಯೋವರೆಗೂ ಮರೆಯಲ್ಲ
ಟೆಂಟಲ್ಲಿ ಪಿಚ್ಚರು ನೋಡಿದ್ದು
ಬೊಟಿನ ಹಂಚ್ಕೊಂಡು ತಿಂದಿದ್ದು
ಬಾಲ್ಯ ಅನ್ನೋದೇ ವಿಶೇಷ
ಬಾಲ್ಯದೊಳಗೆ ಸಂತೋಷ
ಶಾಲೇನೆ ಮನೇನೆ ಆಗಿತ್ತು
ತೆಂಗಿನ ಗರಿಯ ವಾಚ್ ಇತ್ತು
ಬಾಲ್ಯಬೇಕು ಮತ್ತೊಮ್ಮೆ ಹೇಗೆ ಹೋಗಲಿ ಇನ್ನೊಮ್ಮೆ
ನಮ್ಮಲ್ ಭೇದ ಭಾವ ಇರಲೆ ಇಲ್ಲ
ಜಾತಿ ಅನ್ನೋದ್ ಇದೆ ಅಂತ ಗೊತ್ತೇ ಇರಲಿಲ್ಲ
ಊರಲ್ ಕಾಡಲ್ ಮೇಡಲ್ ನಾವೇ ಎಲ್ಲ
ಗಾಯ ಆದ್ರೆ ಏಂಜಲ್ ಹಚ್ಚೋ ಗೆಳೆಯ ಈಗಿಲ್ಲ
ಆಗ ಹಳ್ಳಿಲಿ ಆಡಿದ ತುಂಟಾಟ
ಕೋ ಕೋ ಕಬಡ್ಡಿ ನೀರಟ
ಎಲ್ಲಾ ನೆನಪು ಬಂದರೆ ಏನೋ ಆನಂದ
ಹಳೆ ಗೆಳೆಯರೆಲ್ಲ ದೂರ
ಹಳೇ ಬೀದಿ ಈಗ ದೂರ
ಕಳೆದಿರುವುದು ಎಳೆ ಮನಸಿನ ಹಳೆ ಹೃದಯ
Adu Chandada Kaala Song Lyrics In English:
Tandaani taane tanaane
Tandani taane tanaananane
Hey tarari taare tananaana
Tandani taanaana..
Adu chandada kaala ondu andada kaala
Hitavaada nenapu bogase thumbi
Belesida kaala
Marakoti aata aadi balu tarale thite maadi
Maralalle maneya kattida kaala
Matte suguvudeno saala
Mugdavada balya kaala
Yendu mareyalaare sletina chila
Hale geleyarella dura
Halebeedi ega dura
Kalediruvudu yele manasina hale hrudaya
Prathi manuja neneyuva
Nenapina kaala aduve
Nishkalmasha vatsalya yelli hoytu
Hey nange drusti tegedu jeeva
Nanna bhayava kaleda jeeva
Mareyaagi hoda novu aliyadu
Ondu prema katheya nodi
Aa jodiyannu kaadi
Nagutidda kaala yendu mareyadu
Balapa tindiddella mareyo mathilla
Balya edda shalegiga hogo hambala
Jeballiga koti lekka illa
Appan jebal kadda kaasina munde yenilla
Nimbe huli kottiro sukhana
Pepar mentina sihiya majana
E janmavu mugiyo varegu mareyalla
Tentalli picturu nodiddu
Botina hanchkomdu tindiddu
Balya annode vishesha
Balyadolage santosha
Shalene manene agittu
Tengina gariya watch ettu
Balyabeku mattomme
Hege hogali innomme
Nammal bheda bhava erale illa
Jaathi annod ede anta gothe eralilla
Ural kaadal medal nave yella
Gaya adre enjal haccho geleya egilla
Aaga hallili aadida tuntata
Kho kho kabbaddi neerata
Yella nenapu bandare yeno ananda
Hale geleyarella dura
Halebeedi ega dura
Kalediruvudu yele manasina hale hrudaya